ತೆಹ್ರಾನ್, ಮಂಗಳವಾರ, 14 ಸೆಪ್ಟೆಂಬರ್ 2010( 19:15 IST )
ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕೈದಿಯಾಗಿದ್ದ ಅಮೆರಿಕದ ಸಾರಾ ಶುರ್ಡ್ ಅವರನ್ನು ಇರಾನ್ ಬಿಡುಗಡೆ ಮಾಡಿರುವುದಾಗಿ ಇಂಗ್ಲಿಷ್ ಚಾನೆಲ್‌ವೊಂದರ ವರದಿ ತಿಳಿಸಿದೆ.
ಇರಾನ್ ಅಮೆರಿಕದ ಪ್ರಜೆ ಸಾರಾ ಶುರ್ಡ್ ಅವರನ್ನು ಬಿಡುಗಡೆ ಮಾಡಿರುವುದಾಗಿ ಕೆಂಪು ಬಣ್ಣದ ಬ್ಯಾನರ್ ಹೆಡ್ಡಿಂಗ್‌ನಲ್ಲಿ ಸುದ್ದಿಯನ್ನು ಪ್ರಸಾರ ಮಾಡಿರುವುದಾಗಿ ಪ್ರೆಸ್ ಟಿವಿ ಹೇಳಿದೆ.
ಸಾರಾರನ್ನು ಇರಾನ್ ನ್ಯಾಯಾಲಯ ಆರೋಗ್ಯದ ಕಾರಣದಿಂದಾಗಿ 500,000 ಡಾಲರ್ ದಂಡ ವಿಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಸಾರಾ ಕುಟುಂಬದ ಮೂಲಗಳು ತಿಳಿಸಿವೆ. ಈ ಹಣವನ್ನು ಅಮೆರಿಕವೇ ಭರಿಸುವುದಾಗಿ ಹೇಳಿದೆ.
2009 ಜುಲೈ 31ರಂದು ಸಾರಾ ಹಾಗೂ ಆಕೆಯ ಅಮೆರಿಕದ ಇಬ್ಬರು ಗೆಳೆಯರನ್ನು ಇರಾಕ್ ಗಡಿಯಲ್ಲಿ ಬಂಧಿಸಿದ್ದರು. ಮೂವರು ಮಂದಿ ಗುಪ್ತಚರ ಚಟುವಟಿಕೆ ನಡೆಸುತ್ತಿದ್ದಾರೆಂದು ಆರೋಪಿ ಸೆರೆ ಹಿಡಿದಿತ್ತು.