ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಸರಕಾರದ ವಿರುದ್ಧ ಜನ ದಂಗೆ ಏಳ್ಬೇಕು: ಅಲ್ ಖಾಯಿದಾ (Pakistan | Ayman al-Zawahiri | Al-Qaeda | revolt | floods)
Bookmark and Share Feedback Print
 
ದೇಶದಲ್ಲಿನ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ, ನೆರವು ಕಲ್ಪಿಸುವಲ್ಲಿ ಆಡಳಿತಾರೂಢ ಪಾಕ್‌ನ ಭ್ರಷ್ಟ ಸರಕಾರದ ವಿರುದ್ಧ ಪಾಕಿಸ್ತಾನಿಯರು ದಂಗೆ ಏಳಬೇಕು ಎಂದು ಅಲ್ ಖಾಯಿದಾದ ಎರಡನೇ ಕಮಾಂಡರ್ ಐಮನ್ ಅಲ್ ಜವಾಹರಿ ಕರೆ ನೀಡಿದ್ದಾನೆ.

ಪಾಕಿಸ್ತಾನದ ಕಳ್ಳ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪಾಶ್ಚಾತ್ಯ ದೇಶಗಳೊಂದಿಗಿನ ಸಂಬಂಧ ಸುಧಾರಿಸಲು ತುಂಬಾ ಬ್ಯುಸಿಯಾಗಿರುವುದಾಗಿ ಜವಾಹರಿ ಹಣೆಪಟ್ಟಿ ಕಟ್ಟಿದ್ದು, ಆಡಳಿತಾರೂಢ ಪಾಕ್ ಸರಕಾರ ಕೂಡ ಪಾಕಿಸ್ತಾನದ ಮಿಲಿಟರಿಯಂತೆ ದೇಶೀಯ ಮತ್ತು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಲು ಹಾತೊರೆಯುತ್ತಿವೆ ಎಂದು ಆರೋಪಿಸಿದ್ದಾನೆ.

ಪಾಕಿಸ್ತಾನದ ಜನರು ಪ್ರವಾಹ ಸ್ಥಿತಿಯಿಂದ ತತ್ತರಿಸಿ ಹೋಗಿದ್ದರೂ ಕೂಡ ಜನಸಾಮಾನ್ಯರ ಸಂಕಷ್ಟ ಪರಿಹರಿಸಲು ಸರಕಾರ ಮುಂದಾಗುತ್ತಿಲ್ಲ. ಇದರಿಂದಾಗಿ ಪಾಕ್ ಜನರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಜವಾಹರಿ ಅರೇಬಿಕ್, ಇಂಗ್ಲಿಷ್, ಪಾಶ್ತೋ ಹಾಗೂ ಉರ್ದು ಭಾಷೆಯಲ್ಲಿ ಬಿಡುಗಡೆ ಮಾಡಿರುವ 44 ನಿಮಿಷಗಳ ವೀಡಿಯೋ ಸಂದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಸುಮಾರು 20 ಮಿಲಿಯನ್ ಜನರು ತೊಂದರೆಗೊಳಗಾಗಿದ್ದು, ಹೆಕ್ಟೇರ್‌ಗಟ್ಟಲೇ ಭೂಮಿ, ಮನೆ-ಮಠ ಕಳೆದುಕೊಂಡಿದ್ದಾರೆ. 1,700 ಜನ ಸಾವನ್ನಪ್ಪಿದ್ದರು.

ಜನರ ಸಂಕಷ್ಟ ಪರಿಹರಿಸದೆ, ಭ್ರಷ್ಟಾಚಾರದಲ್ಲಿಯೇ ತೊಡಗಿರುವ ಪಾಕ್ ಸರಕಾರದ ವಿರುದ್ಧ ಪಾಕಿಸ್ತಾನದ ಜನರು ಮೌನವಾಗಿರುವುದು ಸರಿಯಲ್ಲ. ಸರಕಾರದ ವಿರುದ್ಧ ದಂಗೆ ಏಳಬೇಕು ಎಂದು ಜವಾಹರಿ ಕರೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ