ಭಾರತ-ಪಾಕ್-ಅಫ್ಘಾನ್: ಡ್ರಗ್ ಉತ್ಪಾದನೆಯಲ್ಲಿ ನಂ.1: ಬರಾಕ್
ವಾಷಿಂಗ್ಟನ್, ಶುಕ್ರವಾರ, 17 ಸೆಪ್ಟೆಂಬರ್ 2010( 16:45 IST )
ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಇತರ 17 ದೇಶಗಳು ಪ್ರಪಂಚದಲ್ಲಿಯೇ ಡ್ರಗ್ ಸಾಗಾಣೆಯ ಅಥವಾ ಅಕ್ರಮ ಮಾದಕ ವಸ್ತುಗಳ ಉತ್ಪಾದನೆಯ ಪ್ರಮುಖ ದೇಶಗಳಾಗಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುರುತಿಸಿದ್ದಾರೆ.
ಡ್ರಗ್ ಉತ್ಪಾದನೆಯ ಪಟ್ಟಿಯಲ್ಲಿ ಬಾಹಾಮಾಸ್, ಬೋಲಿವಿಯಾ, ಕೊಲಂಬಿಯಾ, ಕೋಸ್ಟಾ ರಿಕಾ, ಡೋಮಿನಿಕನ್ ರಿಪಬ್ಲಿಕ್, ಈಕ್ವಾಡರ್, ಗ್ವಾಟೆಮಾಲಾ, ಹೈಟಿ, ಹೋಂಡುರಾಸ್, ಜಮೈಕಾ, ಲಾವೋಸ್, ಮೆಕ್ಸಿಕೋ, ನಿಕಾರಾಗುವಾ, ಪನಾಮಾ. ಪೆರು ಮತ್ತು ವೆನಿಜುವೆಲಾ ಸೇರಿದೆ.
ಪ್ರಪಂಚದಲ್ಲಿಯೇ ಮಾದಕ ದ್ರವ್ಯ ಉತ್ಪಾದನೆಯ ಪ್ರಮುಖ ಪಟ್ಟಿಯಲ್ಲಿ ಭಾರತ, ಪಾಕ್, ಅಫ್ಘಾನ್ ಸೇರಿದಂತೆ ಇನ್ನಿತರ 17 ದೇಶಗಳನ್ನು ಅಮೆರಿಕ ಗುರುತಿಸಿದೆ. ಆ ನಿಟ್ಟಿನಲ್ಲಿ ವಾಣಿಜ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಅಕ್ರಮವಾಗಿ ಮಾದಕ ದ್ರವ್ಯ ಉತ್ಪಾದನೆ, ಸಾಗಾಣೆ ಮಾಡುತ್ತಿರುವ ಬಗ್ಗೆ ಆಯಾ ದೇಶಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬರಾಕ್ ಅವರು ಸೆಕ್ರೆಟರ್ ಆಫ್ ಸ್ಟೇಟ್ಸ್‌ಗೆ ಕಳುಹಿಸಿರುವ ನಿವೇದನಾ ಪತ್ರದಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಡ್ರಗ್ ನಿಗ್ರಹ ಒಪ್ಪಂದದ ಪ್ರಕಾರ ಬೋಲಿವಿಯಾ, ಬರ್ಮಾ ಹಾಗೂ ವೆನಿಜುಲಾ ದೇಶಗಳು ಕಳೆದ 12 ತಿಂಗಳಲ್ಲಿ ಮಾದಕ ದ್ರವ್ಯ ಸಾಗಣೆ, ಉತ್ಪಾದನೆ ತಡೆಯಲು ವಿಫಲವಾಗಿರುವುದಾಗಿ ಬರಾಕ್ ವಿವರಿಸಿದ್ದಾರೆ. ಆದರೂ ಕೂಡ ದ್ವಿಪಕ್ಷೀಯ ಕಾರ್ಯಕ್ರಮದಂತೆ ಬೋಲಿವಿಯಾ ಮತ್ತು ವೆನಿಜುವೆಲಾ ದೇಶಗಳಿಗೆ ಅಮೆರಿಕ ತನ್ನ ಬೆಂಬಲ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.