ಮಹಿಳೆಯರ ನಗ್ನಚಿತ್ರ ಸೆರೆಹಿಡಿದ ಬೌದ್ಧ ಸನ್ಯಾಸಿಗೆ ಜೈಲುಶಿಕ್ಷೆ!
ಫನೋಮ್ಪೆನಾ, ಶನಿವಾರ, 18 ಸೆಪ್ಟೆಂಬರ್ 2010( 13:47 IST )
ಬೌದ್ಧ ವಿಹಾರದ ಪವಿತ್ರ ನೀರಿನಲ್ಲಿ ಸುಮಾರು ನೂರಕ್ಕೂ ಅಧಿಕ ಮಹಿಳೆಯರು ನಗ್ನವಾಗಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಬೋಡಿಯಾದ ಬೌದ್ಧ ಸನ್ಯಾಸಿಯೊಬ್ಬ ರಹಸ್ಯವಾಗಿ ಚಿತ್ರೀಕರಣ ಮಾಡಿದ ಆರೋಪದಲ್ಲಿ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.
ಬೌದ್ಧ ವಿಹಾರದ ಪಗೋಡಾ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ನೂರಾರು ಮಹಿಳೆಯರ ನಗ್ನ ಚಿತ್ರೀಕರಣ ಮಾಡಿ ಅದನ್ನು ಹಂಚಿದ ಆರೋಪದ ಹಿನ್ನೆಲೆಯಲ್ಲಿ ಬೌದ್ಧ ಸನ್ಯಾಸಿ ನೆಟ್ ಖಾಯ್(37)ಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲುಶಿಕ್ಷೆ ನೀಡಿದೆ.
ಮಹಿಳೆಯರು ನಗ್ನವಾಗಿ ಸ್ನಾನ ಮಾಡುತ್ತಿದ್ದ ಚಿತ್ರವನ್ನು ರಹಸ್ಯವಾಗಿ ಸೆರೆ ಹಿಡಿದು ಅದರ ವೀಡಿಯೋ ಕ್ಲಿಪ್ಸ್ ಅನ್ನು ವಿವಿಧ ಮೊಬೈಲ್‌ಗಳಿಗೆ ರವಾನಿಸಿರುವುದಾಗಿ 23ರ ಹರೆಯದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿಮ್ ಡಾನೈ, ಮಾಜಿ ಬೌದ್ಧ ಸನ್ಯಾಸಿಗೆ ಜೈಲುಶಿಕ್ಷೆ ವಿಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅದೇ ರೀತಿ ಸನ್ಯಾಸಿ ವಿರುದ್ಧ ಮೂರು ಮಹಿಳೆಯರು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಆಪ್ತವಲಯಕ್ಕೆ ರವಾನಿಸಿ ವಿಕೃತ ಸಂತಸ ಪಡುತ್ತಿದ್ದ ನೆಟ್‌ಗೆ ನ್ಯಾಯಾಲಯ ಎರಡು ಮಿಲಿಯನ್( 500 ಡಾಲರ್) ದಂಡ ವಿಧಿಸಿ, ಪ್ರಕರಣದಲ್ಲಿ ಅವಮಾನಕ್ಕೊಳಗಾದವರಿಗೆ ಹತ್ತು ಸಾವಿರ ಡಾಲರ್ ಪರಿಹಾರ ನೀಡುವಂತೆ ಸೂಚಿಸಿದೆ. ಕಾಮುಕ ಮಾಜಿ ಬೌದ್ಧ ಸನ್ಯಾಸಿ ವಿರುದ್ಧ ದೂರು ದಾಖಲಾದ ನಂತರ ಜೂನ್ ತಿಂಗಳಿನಲ್ಲಿ ಕಾಂಬೋಡಿಯಾದಲ್ಲಿ ಪೊಲೀಸರು ಆತನನ್ನು ಸೆರೆ ಹಿಡಿದಿದದ್ದರು.