ವಾಷಿಂಗ್ಟನ್, ಭಾನುವಾರ, 19 ಸೆಪ್ಟೆಂಬರ್ 2010( 16:44 IST )
ಎಚ್1ಬಿ ವೀಸಾ ಶುಲ್ಕ ಹೆಚ್ಚಳದ ಬಗ್ಗೆ ಭಾರತ ತನ್ನ ತೀವ್ರ ಕಳವಳವನ್ನು ಅಮೆರಿಕಾಕ್ಕೆ ವ್ಯಕ್ತಪಡಿಸಿದೆ. ಶುಕ್ರವಾರ ಅಮೆರಿಕದ ವಿವಿಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಮ್ಮ ಕಳವಳ ವ್ಯಕ್ತಪಡಿಸಿದರು.
ಇದರೊಂದಿಗೆ ಮುಂದಿನ ವಾರ ವಾಷಿಂಗ್ಟನ್ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯ ಮತ್ತೊಮ್ಮೆ ಪ್ರಸ್ತಾವನೆಯಾಗುವ ಸಾಧ್ಯತೆಯಿದೆ.
ಉಭಯ ದೇಶಗಳ ಬಾಂಧವ್ಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವ ಇರಾದೆಯನ್ನು ಭಾರತ ಹೊಂದಿದೆ.