ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ (57) ಪತ್ನಿ ಲುಡ್ಮಿಲಾ ಅವರಿಂದ ದೂರವಾಗುವ ಲಕ್ಷಣ ಗೋಚರಿಸತೊಡಗಿದ್ದು, ಪುಟಿನ್ ಜಿಮ್ನಾಸ್ಟಿಕ್ ಮಾಜಿ ಚಾಂಪಿಯನ್ 24ರ ಹರೆಯದ ಚೆಲುವೆ ಅಲಿನಾ ಕಬೇವಾ ಜೊತೆ ವಿವಾಹವಾಗುವ ತಯಾರಿ ನಡೆಸುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಪುಟಿನ್ ಇತ್ತೀಚೆಗಷ್ಟೇ ಪತ್ನಿ ಲುಡಾಮಿಲಾ ಜೊತೆಗಿನ ಸಂಬಂಧ ಕಡಿದುಕೊಂಡಿದ್ದು, 24ರ ಯುವತಿ ಕಬೇವಾ ಜೊತೆ ಮದುವೆಯ ಸಿದ್ದತೆ ನಡೆಸುತ್ತಿರುವುದಾಗಿ ಮಾಸ್ಕೋ ದೈನಿಕವೊಂದರ ವರದಿ ಬಹಿರಂಗಗೊಳಿಸಿದೆ. ಜಿಮ್ನಾಸ್ಟಿಕ್ನ ಮಾಜಿ ಚಾಂಪಿಯನ್ ಆಗಿರುವ ಕಬೇವಾ ಮತ್ತು ಪುಟಿನ್ ನಾಲ್ಕೈದು ವರ್ಷಗಳಿಂದ ರಹಸ್ಯ ಪ್ರೇಮಿಗಳಾಗಿದ್ದಾರೆಂದು ವರದಿ ಹೇಳಿದೆ.
ಮಾಸ್ಕೋ ರೆಸ್ಟೋರೆಂಟ್ವೊಂದರಲ್ಲಿ ಅಲಿನಾ ಪುಟಿನ್ ಅವರಿಗೆ ಕಿಸ್ ಕೊಟ್ಟಿರುವ ಭಂಗಿಯಲ್ಲಿ ಸೆರೆಸಿಕ್ಕಿರುವುದಾಗಿಯೂ ರಷ್ಯಾದ ವೆಬ್ಸೈಟ್ವೊಂದು ಹೇಳಿದೆ. ಅಲ್ಲದೇ ಕಬೇವಾ ಇತ್ತೀಚೆಗಷ್ಟೇ ಸಂಸದ್ ಸದಸ್ಯಳಾಗಿದ್ದಾಳೆ.
ನವ ತರುಣಿಯಾಗಿರುವ ಕಬೇವಾ ರಷ್ಯಾದ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು, ಅಷ್ಟೇ ಅಲ್ಲ ಉತ್ತಮ ಕ್ರೀಡಾಳು ಕೂಡ. ಈಕೆ 15ರ ಹರೆಯದಲ್ಲಿಯೇ 1998ರಲ್ಲಿ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಳು. ನಂತರದ ವರ್ಷದಲ್ಲಿ ವರ್ಲ್ಡ್ ಟೈಟಲ್ ಅನ್ನು ತನ್ನ ಮುಡಿಗೇರಿಸಿಕೊಂಡಿದ್ದ ಚೆಲುವೆ ಕಬೇವಾ ಸಿಡ್ನಿ ಓಲಿಂಪಿಕ್ಸ್ನಲ್ಲಿಯೂ ಗೆಲುವು ಸಾಧಿಸಿದ್ಧಳು.