ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ಯಾಗಿನಲ್ಲಿ ಪ್ರೇಯಸಿಯ ತಲೆಯಿಟ್ಟುಕೊಂಡು ಬಾರಿನಲ್ಲಿ ಕುಡಿದ! (Spain | Girlfriend | Bag | Murder)
Bookmark and Share Feedback Print
 
ಪ್ರೇಯಸಿಯ ಹತ್ಯೆಯ ನಂತರ ಆಕೆಯ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ತನ್ನ ಗೆಳೆಯರ ಜತೆ ಬಾರೊಂದರಲ್ಲಿ ಹಂತಕ ಪ್ರಿಯಕರ ಬಿಯರ್ ಕುಡಿದಿದ್ದ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಈ ಘಟನೆ ನಡೆದಿರುವುದು ಸ್ಪೇನ್‌ನಲ್ಲಿ. ಬಾರಿನಲ್ಲಿ ಕುಡಿದ ನಂತರ ಬೃಹತ್ ವಿದ್ಯುತ್ ಕಂಬವನ್ನೇರಿದ್ದ 34ರ ಹರೆಯದ ವ್ಯಕ್ತಿ, ವಿದ್ಯುತ್ ಆಘಾತಕ್ಕೊಳಗಾಗಿ 30 ಮೀಟರ್ ಎತ್ತರದಿಂದ ಕೆಳಗೆ ಬಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪತ್ರಿಕಾ ವರದಿಗಳ ಪ್ರಕಾರ ಆ ವ್ಯಕ್ತಿ ತಾನು ತನ್ನ 30ರ ಹರೆಯದ ಪ್ರೇಯಸಿ ಶಿರಚ್ಛೇದನ ಮಾಡಿರುವುದಾಗಿ ಗೆಳೆಯರ ಜತೆ ಹೇಳಿಕೊಂಡಿದ್ದ. ಆದರೆ ಆತನ ಮನೋಸ್ಥಿತಿ ಸಾಮಾನ್ಯವಾಗಿದ್ದುದರಿಂದ ಹೇಳಿರುವುದು ಜೋಕ್ ಎಂದು ಅಂದುಕೊಂಡಿದ್ದ. ಆತ ಅಂಗಿಯಲ್ಲಿ ರಕ್ತದ ಕಲೆಗಳಿದ್ದರೂ ಗೆಳೆಯರು ಹತ್ಯೆ ನಡೆದಿರುವುದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

ಇದಾದ ಸ್ವಲ್ಪವೇ ಹೊತ್ತಿನಲ್ಲಿ ಬಾರಿನಲ್ಲಿನ ಗ್ರಾಹಕರು ಹೊರಗೆ ಬಂದಾಗ ರಸ್ತೆಯಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿತ್ತು. ಹತ್ತಿರದಲ್ಲೇ ಒಂದು ಬ್ಯಾಗು ಕೂಡ ಪತ್ತೆಯಾಯಿತು. ತೆರೆದು ನೋಡಿದಾಗ ಅದರಲ್ಲಿ ಯುವತಿಯೊಬ್ಬಳ ತಲೆಯಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಈ ಹೊತ್ತಿಗೆ ಅತ್ತ ತಲೆಯಿಲ್ಲದ ಮಹಿಳೆಯ ದೇಹವೊಂದು ಪತ್ತೆಯಾಗಿತ್ತು. ಕಳೇಬರದಲ್ಲಿ ಚೂರಿಯಿಂದ ಇರಿದ ಗಾಯಗಳಾಗಿದ್ದುದು ಕಂಡು ಬಂದಿತ್ತು. ವ್ಯಕ್ತಿಯೊಬ್ಬ ವಿದ್ಯುತ್ ಕಂಬದಿಂದ ಬಿದ್ದು ಸಾವನ್ನಪ್ಪಿದ ಮತ್ತು ಯುವತಿ ತಲೆ ಪತ್ತೆಯಾಗಿರುವುದು ಇದಕ್ಕೆ ಹೋಲಿಕೆಯಾದ ನಂತರ ಇದು ಒಂದೇ ಪ್ರಕರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು.

ಯುವತಿಯ ಶವದ ಪಕ್ಕದಲ್ಲಿಯೇ ಚೂರಿಯೊಂದು ಪತ್ತೆಯಾಗಿತ್ತು. ಇದರಿಂದಲೇ ಆಕೆಯನ್ನು ವ್ಯಕ್ತಿ ಹತ್ಯೆ ಮಾಡಿರಬಹುದು. ಆದರೆ ಇದರ ಹಿಂದಿನ ಕಾರಣಗಳೇನು ಎಂಬುದು ತಕ್ಷಣ ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ