ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದ ರಕ್ಷಣಾ ವೆಚ್ಚಕ್ಕೆ 110 ಬಿಲಿಯನ್ ರೂ. ಸೇರ್ಪಡೆ (Pakistan | military operations | Taliban | Maj Gen Athar Abbas)
Bookmark and Share Feedback Print
 
ಅಫಘಾನಿಸ್ತಾನದ ಗಡಿ ಭಾಗದಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿ ತಾಲಿಬಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 442 ಬಿಲಿಯನ್ ರೂಪಾಯಿಗಳಿಗೆ ಇನ್ನೂ 110 ಬಿಲಿಯನ್ ರೂಪಾಯಿಗಳನ್ನು ಸೇರಿಸಿ ಪಾಕಿಸ್ತಾನ ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಪಾಕಿಸ್ತಾನ ಸಲ್ಲಿಸಿರುವ ಶ್ವೇತಪತ್ರದಲ್ಲಿ ಈ ವಿವರಣೆಗಳನ್ನು ನೀಡಲಾಗಿದೆ. ಅದರ ಪ್ರಕಾರ ಅಭಿವೃದ್ಧಿಗಾಗಿನ ನಿಧಿಯಲ್ಲಿ 73 ಬಿಲಿಯನ್ ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿನ ಆಯವ್ಯಯದಿಂದ ಶೇ.50 ಮತ್ತು ಅಭಿವೃದ್ಧಿಯೇತರ ವಿಭಾಗದಿಂದ ಶೇ.20ರ ಕಡಿತವನ್ನು ಮಾಡಲಾಗಿದೆ. ಇದರಿಂದಲೇ ಮಿಲಿಟರಿಗೂ ಹೆಚ್ಚುವರಿ ನಿಧಿಯನ್ನು ಬಳಸಲಾಗಿದೆ ಎಂದು ವರದಿಗಳು ಹೇಳಿವೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿತ್ತು.

2010-11ರ ಸಾಲಿನಲ್ಲಿ ರಕ್ಷಣಾ ವೆಚ್ಚಕ್ಕೆಂದು 442.2 ಬಿಲಿಯನ್ ರೂಪಾಯಿಗಳಿಗೆ ಸಂಸತ್ ಅಂಗೀಕಾರ ನೀಡಿತ್ತು. ನಂತರ ಹೆಚ್ಚುವರಿ ನಿಧಿಯನ್ನು ಪಡೆದುಕೊಳ್ಳುವುದರೊಂದಿಗೆ ಒಟ್ಟಾರೆ ವೆಚ್ಚ 552 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ.

ಪತ್ರಿಕಾ ವರದಿಗಳ ಪ್ರಕಾರ ಹೆಚ್ಚುವರಿ ಮಾಡಲಾಗಿರುವ ರಕ್ಷಣಾ ವೆಚ್ಚವನ್ನು ಅಫಘಾನಿಸ್ತಾನ ಗಡಿ ಭಾಗದಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಥರ್ ಅಬ್ಬಾಸ್, ಈ ಕುರಿತು ನನಗೇನೂ ಮಾಹಿತಿಯಿಲ್ಲ. ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ