ನ್ಯೂಯಾರ್ಕ್, ಶುಕ್ರವಾರ, 24 ಸೆಪ್ಟೆಂಬರ್ 2010( 13:48 IST )
PTI
ಅಮೆರಿಕದಲ್ಲಿ ನಡೆದ 9/11 ದಾಳಿಯಲ್ಲಿ ಸರಕಾರದಲ್ಲಿರುವ ಕೆಲ ವಿಚ್ಚಿದ್ರಕಾರಿ ಶಕ್ತಿಗಳ ಕೈವಾಡವಿದೆ ಎಂದು ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿರುವುದು ಕೋಲಾಹಲ ಸೃಷ್ಟಿಸಿದೆ.
ಕುಸಿಯುತ್ತಿರುವ ಅಮೆರಿಕದ ಆರ್ಥಿಕತೆಗೆ ಚೇತರಿಕೆ ನೀಡಲು ಅಮೆರಿಕ ಸರಕಾರದಲ್ಲಿರುವ ಕೆಲ ಶಕ್ತಿಗಳು 9/11 ದಾಳಿಯ ಯೋಜನೆಯನ್ನು ರೂಪಿಸಿವೆ ಎಂದು ತಿರುಗೇಟು ನೀಡಿದ್ದಾರೆ.
9/11 ದಾಳಿಯಲ್ಲಿ ಅಮೆರಿಕದ ಕೈವಾಡವಿದೆ ಎನ್ನುವುದುನ್ನು ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳ ಬಹುತೇಕ ಜನತೆ ಭಾವಿಸಿದ್ದಾರೆ. ಮತ್ತು ಬಹುತೇಕ ರಾಜಕಾರಣಿಗಳು ಕೂಡಾ ಅದೇ ರೀತಿ ಭಾವಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷರು ಹೇಳಿದ್ದಾರೆ.
9/11ಘಟನೆಯ ಕುರಿತಂತೆ ವಿಶ್ವಸಂಸ್ಥೆ, ಸ್ವತಂತ್ರ ತನಿಖಾ ತಂಡವನ್ನು ರಚಿಸಿ,ತನಿಖೆಗೊಳಪಡಿಸಿದಲ್ಲಿ ಸತ್ಯಾಂಶ ಹೊರಬೀಳಲಿದೆ. ಭ್ರಮೆಯಲ್ಲಿರುವ ವಿಶ್ವದ ಜನತೆಗೆ ಸತ್ಯ ಸಂಗತಿ ಅರಿವಿಗೆ ಬರಲಿದೆ ಎಂದು ಅಹ್ಮದಿನೆಜಾದ್ ತಿಳಿಸಿದ್ದಾರೆ.
ಸೆಪ್ಟಂಬರ್ 11 ರಂದು ನಡೆದ ದಾಳಿಯ ನಂತರ ಅಮೆರಿಕ, ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ ಯುದ್ಧ ಘೋಷಿಸಿದ್ದಲ್ಲದೇ ಇರಾನ್‌ನ ಅಣುಕಾರ್ಯಕ್ರಮಗಳಿಗೆ ತಡೆಯೊಡ್ಡಲು ಪ್ರಯತ್ನಿಸಿತು ಎಂದು ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಆರೋಪಿಸಿದ್ದಾರೆ.