ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಿಲಿಪೈನ್ಸ್:ರೇಪಿಸ್ಟ್ ತಂದೆಗೆ 14,400 ವರ್ಷ ಕಠಿಣ ಶಿಕ್ಷೆ (philippines dad | daughter's rape | 400 years jail | 14400 years in prison)
ಫಿಲಿಪೈನ್ಸ್:ರೇಪಿಸ್ಟ್ ತಂದೆಗೆ 14,400 ವರ್ಷ ಕಠಿಣ ಶಿಕ್ಷೆ
ಮನಿಲಾ, ಶುಕ್ರವಾರ, 24 ಸೆಪ್ಟೆಂಬರ್ 2010( 15:36 IST )
ಹದಿಹರೆಯದ ಮಗಳನ್ನು ವರ್ಷದ ಅವಧಿಯಲ್ಲಿ ಪ್ರತಿನಿತ್ಯ ಅತ್ಯಾಚಾರವೆಸಗಿದ ರೇಪಿಸ್ಟ್ ತಂದೆಗೆ, ಫಿಲಿಫೈನ್ಸ್ ನ್ಯಾಯಾಲಯ 14,400 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಆರೋಪಿಯ ಪತ್ನಿ ಹಾಂಗ್‌ಕಾಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ವರ್ಷದ ಅವಧಿಯಲ್ಲಿ 360 ಬಾರಿ ಅತ್ಯಾಚಾರ ನಡೆಸಿದ ಆರೋಪಿ ತಂದೆಯ ಕೃತ್ಯವನ್ನು ಖಂಡಿಸಿದ ವಿಚಾರಣಾ ನ್ಯಾಯಾಲಯ ಮಾರ್ಚ್ 2006ರಲ್ಲಿ ಮರಣದಂಡನೆಯನ್ನು ವಿಧಿಸಿತ್ತು.
ಆದರೆ, ಮನಿಲಾದ ನ್ಯಾಯಾಲಯ ಪ್ರತಿ ಬಾರಿಯ ಅತ್ಯಾಚಾರಕ್ಕೆ 40 ವರ್ಷಗಳ ಶಿಕ್ಷೆಯೊಂದಿಗೆ 360 ಬಾರಿ ಅತ್ಯಾಚಾರ ವೆಸಗಿದ್ದರಿಂದ ಆರೋಪಿಗೆ 14,400 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ದಕ್ಷಿಣ ಮನಿಲಾದಲ್ಲಿರುವ ಲಾಸ್ ಬೊನೊಸ್ ನಗರದಲ್ಲಿ ವಾಸವಾಗಿದ್ದಾಗ ನಾನು 13 ವರ್ಷದವಳಾಗಿದ್ದೆ.ತಂದೆಯ ಜೊತೆಯಲ್ಲಿ ಮೂರು ಮಕ್ಕಳನ್ನು ಬಿಟ್ಟು ತಾಯಿ ಮನೆಕೆಲಸದ ಉದ್ಯೋಗಕ್ಕಾಗಿ ಹಾಂಗ್‌ಕಾಂಗ್‌ನಲ್ಲಿ ನೆಲೆಸಿದ್ದಳು.
ತಂದೆ, ತಿಂಗಳ ರಜೆಯಲ್ಲಿದ್ದಾಗ ಹೊರತುಪಡಿಸಿ ಪ್ರತಿನಿತ್ಯ ಲೈಂಗಿಕ ಸಂಪರ್ಕಕ್ಕಾಗಿ ಒತ್ತಾಯಿಸುತ್ತಿದ್ದರು. ಬಲಾತ್ಕಾರವಾಗಿ ಸಂಭೋಗಿಸಿ ತೃಪ್ತಿಪಡುತ್ತಿದ್ದರು. ತಿಂಗಳ ರಜೆಯಲ್ಲಿದ್ದ ಸಂದರ್ಭದಲ್ಲಿ ಮುಖ ಮೈಥುನ ನಡೆಸುವಂತೆ ಒತ್ತಾಯಿಸುತ್ತಿದ್ದರು ಎಂದು ಅತ್ಯಾಚಾರಕ್ಕೊಳಗಾದ ಯುವತಿ ತನ್ನ ದುರಂತ ಕಥೆಯನ್ನು ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾಳೆ.
ತಾಯಿಯ ಸಂಬಂಧಿಗಳೊಂದಿಗೆ ರಜಾ ದಿನಗಳನ್ನು ಕಳೆಯಲು ಹಾಂಗ್‌ಕಾಂಗ್‌ಗೆ ಆಗಮಿಸಿದ ಯುವತಿ, ರಜಾ ದಿನಗಳು ಮುಕ್ತಾಯವಾದ ನಂತರ ತಂದೆಯ ಬಳಿ ತೆರಳಲು ನಿರಾಕರಿಸಿದಳು.ಕಾರಣ ಕೇಳಿದಾಗ, ತಂದೈಯ ಪೈಶಾಚಿಕ ಕೃತ್ಯವನ್ನು ಸಂಬಂಧಿಕರಿಗೆ, ತಾಯಿಗೆ ತಿಳಿಸಿದಾಗ, ಅತ್ಯಾಚಾರಕ್ಕೊಳಗಾದ ಯುವತಿಯ ಜೊತೆಯಲ್ಲಿ ಮನಿಲಾಗೆ ಆಗಮಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು.