ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೊಂದಿಗೆ ಸೇನಾಬಾಂಧವ್ಯ ವೃದ್ಧಿಗೆ ಬದ್ಧ:ಗೇಟ್ಸ್ (Robert gates | India us ties | A k antony | US visit)
Bookmark and Share Feedback Print
 
ಪೆಂಟೆಗಾನ್ ಭಾರತದೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಬಾಂಧವ್ಯವನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಅಮೆರಿಕದ ರಕ್ಷಣಾ ಸಚಿವ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.

ಪರಸ್ಪರರಿಗೆ ಲಾಭವಾಗುವಂತೆ ಬಾಂಧವ್ಯವನ್ನು ಬಲಪಡಿಸಲು ಉಭಯ ದೇಶಗಳು ಶ್ರಮಿಸುತ್ತಿವೆ. ಮುಂಬರುವ ವಾರದಲ್ಲಿ ಭಾರತದ ರಕ್ಷಣಾ ಸಚಿವ ಎ.ಕೆ.ಆಂಟನಿಯವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಗೇಟ್ಸ್ ತಿಳಿಸಿದ್ದಾರೆ.

ಕಳೆದ ವರ್ಷ ಭಾರತದ ಭೇಟಿ ಫಲಪ್ರದವಾಗಿತ್ತು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ.ಆಂಟನಿಯವರ ಭೇಟಿಯ ಸಂದರ್ಭದಲ್ಲಿ ಸೇನಾ ಸಹಕಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಗೇಟ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಉನ್ನತ ತಂತ್ರಜ್ಞಾನ ವಸ್ತುಗಳ ರಫ್ತಿಗೆ ಅಮೆರಿಕ ಹೇರಿದ ನಿಷೇಧ ಭಾರತಕ್ಕೆ ಕಳವಳ ಮೂಡಿಸಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೇಟ್ಸ್, ಇಂತಹ ನಿಷೇಧಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಅಮೆರಿಕ ಕಾರ್ಯೋನ್ಮುಖವಾಗಿದೆ.ಯಾವುದೇ ರೀತಿಯ ಆತಂಕ ಬೇಡ ಎಂದರು.

ಸೇನೆ-ದಿಂದ-ಸೇನಾ ಬಾಂಧವ್ಯ ವಿಶೇಷವಾಗಿ ಭಾರತದೊಂದಿಗೆ ಪ್ರಬಲವಾಗಿದ್ದು, ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್‌ ಗೇಟ್ಸ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ