ಸ್ಟಾಕ್ಹೋಮ್, ಶನಿವಾರ, 25 ಸೆಪ್ಟೆಂಬರ್ 2010( 13:54 IST )
ಕೆನಡಾದಿಂದ ಹೊರಟಿದ್ದ ಪಾಕಿಸ್ತಾನ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಸ್ಟಾಕ್‌ಹೋಮ್‌ನ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿರುವುದಾಗಿ ವಿಮಾನ ನಿಲ್ದಾಣ ಹಾಗೂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
273 ಪ್ರಯಾಣಿಕರನ್ನು ಹೊತ್ಯೊಯ್ಯುತ್ತಿದ್ದ ಬೋಯಿಂಗ್ 777 ವಿಮಾನದಲ್ಲಿ ಪ್ರಯಾಣಿಕನೊಬ್ಬ ಸ್ಫೋಟಕವನ್ನು ಕೊಂಡೊಯ್ಯುತ್ತಿದ್ದ ಎಂಬ ಬೆದರಿಕೆಯ ಕರೆಯನ್ನು ಕೆನಡಾ ಪೊಲೀಸರು ಸ್ವೀಕರಿಸಿದ್ದರು. ಕೂಡಲೇ ವಿಮಾನವನ್ನು ಮುನ್ನೆಚ್ಚರಿಕೆಯ ಅಂಗವಾಗಿ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಸ್ಟಾಕ್‌ಗಹೋಮ್ ಪೊಲೀಸ್ ವಕ್ತಾರೆ ಸುಸೈ ಇಲ್ಲುಮ್ ವಿವರಿಸಿದ್ದಾರೆ.
ವಿಮಾನ ಲ್ಯಾಂಡ್ ಆದ ಕೂಡಲೇ ಪ್ರಯಾಣಿಕರನ್ನು ಹೊರಕಳುಹಿಸಲಾಗಿದ್ದು, ಸ್ಫೋಟಕ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಟೊರಾಂಟೋ, ಕರಾಚಿ ಮಾರ್ಗದಲ್ಲಿ ಪಾಕ್ ತಲುಪಬೇಕಿತ್ತು. ಆದರೆ ಬೆದರಿಕೆ ಕರೆ ಮಾಹಿತಿ ಪಡೆದ ನಂತರ ಪೈಲಟ್ ಮನವಿ ಮೇರೆಗೆ ಸ್ಟಾಕ್‌ಹೋಮ್‌ನ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣ ವಕ್ತಾರ ಆಂಡರ್ಸ್ ಬ್ರೆಡ್‌ಫಾಲ್ ಹೇಳಿದರು.