ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್-ಪ್ರತಿವರ್ಷ ನಾಲ್ಕು ಲಕ್ಷ ಮಕ್ಕಳು ಸಾಯ್ತಿದ್ದಾರೆ: ವರದಿ (Pakistan | Islamabad | malnutrition | 400,000 kids | 20,000 mothers die)
ಪಾಕ್-ಪ್ರತಿವರ್ಷ ನಾಲ್ಕು ಲಕ್ಷ ಮಕ್ಕಳು ಸಾಯ್ತಿದ್ದಾರೆ: ವರದಿ
ಇಸ್ಲಾಮಾಬಾದ್, ಶನಿವಾರ, 25 ಸೆಪ್ಟೆಂಬರ್ 2010( 18:22 IST )
ಪೌಷ್ಠಿಕ ಆಹಾರದ ಕೊರತೆ, ಸಾಮಾಜಿಕ-ಆರ್ಥಿಕ ಸಮಸ್ಯೆ ಹಾಗೂ ಸೂಕ್ತ ಆರೋಗ್ಯ ಚಿಕಿತ್ಸೆ ದೊರೆಯದ ಪರಿಣಾಮ ಪಾಕಿಸ್ತಾನದಲ್ಲಿ ವರ್ಷಕ್ಕೆ 400,000 ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 20 ಸಾವಿರ ತಾಯಂದಿರು ಸಾವನ್ನಪ್ಪುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪಂಜಾಬ್ ಪ್ರಾಂತ್ಯದ ಆರೋಗ್ಯ ಕಾರ್ಯದರ್ಶಿ ಫಾವಾದ್ ಹಸ್ಸಾನ್ ಫಾವಾದ್ ಅವರು ಈ ಮಾಹಿತಿಯನ್ನು ಹೊರಗೆಡವಿದ್ದು, ಆ ನಿಟ್ಟಿನಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣಾ ಸಪ್ತಾಹವನ್ನು ಸೆಪ್ಟೆಂಬರ್ 28ರವರೆಗೆ ನಡೆಸಲಾಗುವುದು ಎಂದು ತಿಳಿಸಿರುವುದಾಗಿ ಆನ್‌ಲೈನ್ ನ್ಯೂಸ್ ಏಜೆನ್ಸಿ ವರದಿ ಹೇಳಿದೆ.
ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ ಲಕ್ಷಾಂತರ ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಹೆಚ್ಚಿನರು ಮಕ್ಕಳು ಮತ್ತು ತಾಯಿಯಂದಿರಾಗಿದ್ದಾರೆ.
ತಾಯಿ ಮತ್ತು ಮಕ್ಕಳ ಆರೋಗ್ಯ ಸಪ್ತಾಹವನ್ನು ಯುನಿಸೆಫ್ ಜೊತೆ ಜಂಟಿಯಾಗಿ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶದ ಆರು ಲಕ್ಷ ಮಕ್ಕಳು ಹಾಗೂ ಮೂರು ಲಕ್ಷ ತಾಯಂದಿರಿಗೆ ಉತ್ತಮ ಆರೋಗ್ಯ ಸೌಲಭ್ಯವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.