ಬ್ಯಾಂಕಾಕ್, ಭಾನುವಾರ, 26 ಸೆಪ್ಟೆಂಬರ್ 2010( 13:17 IST )
ಥೈಲೆಂಡ್ ಪ್ರಧಾನ ಮಂತ್ರಿ ನಿವಾಸದ ಬಳಿ ಇಂದು ಪ್ರಬಲ ಬಾಂಬ್‌ಸ್ಪೋಟಗೊಂಡಿದೆ. ಆದರೆ, ಯಾವುದೇ ಸಾವು ನೋವುಗಳ ವರದಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶುಕ್ರವಾರದಂದು ನಡದ ಎರಡು ಬಾಂಬ್‌ಸ್ಪೋಟಗಳಲ್ಲಿ ಮೂರು ಮಂದಿ ಗಾಯಗೊಂಡಿದ್ದರು.ನಂತರ ಪೊಲೀಸರು ರಾಜಧಾನಿ ಬ್ಯಾಂಕಾಕ್ ಸೇರಿದಂತೆ ದೇಶದಾದ್ಯಂತ ಭಾರಿ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.ಆದರೆ , ಇಂದು ಬೆಳಿಗ್ಗೆ ಪ್ರಧಾನಿ ನಿವಾಸದ ಬಳಿ ಬಾಂಬ್‌ಸ್ಫೋಟಿಸಿರುವುದು ಆತಂಕ ಮೂಡಿಸಿದೆ.
ಪೊಲೀಸ್ ಅಧಿಕಾರಿ ವೆರಾವಿಟ್ ಚಾಂಚ್‌ಮ್ರೊಯಿನ್ ಮಾತನಾಡಿ, ಪ್ರಧಾನಿ ನಿವಾಸದ ಬಳಿ ಸ್ಪೋಟಗೊಂಡಿರುವ ಕಚ್ಚಾ ಬಾಂಬ್‌ನಿಂದಾಗಿ ಕ್ರೀಡಾಂಗಣದ ಗೋಡೆ ಮತ್ತು ಸೇತುವೆಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಘಟನೆಯ ತನಿಖೆಯನ್ನು ನಡೆಸುತ್ತಿದ್ದು,ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.