ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಧ್ಯಕ್ಷಗಿರಿ: ಒಬಾಮಾ ಮರು ಆಯ್ಕೆಗೆ ಅಮೆರಿಕನ್‌ರ ವಿರೋಧ! (Barack Obama | America | Poll | Washington University | 2008 election,)
Bookmark and Share Feedback Print
 
ಪ್ರಸಕ್ತವಾಗಿ ದೇಶದ ಅಧ್ಯಕ್ಷಗಿರಿಯಲ್ಲಿರುವ ಬರಾಕ್ ಒಬಾಮಾ ಬಗ್ಗೆ ಬಹುತೇಕ ಅಮೆರಿಕನ್‌ರು ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇವಲ ಶೇ.38ರಷ್ಟು ಮಾತ್ರ ಒಬಾಮಾ ಮರು ಆಯ್ಕೆಗೆ ಒಲವು ವ್ಯಕ್ತಪಡಿಸಿರುವುದಾಗಿ ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಅವರನ್ನು ಆಯ್ಕೆ ಮಾಡದಿರುವ ಬಗ್ಗೆಯೇ ಹೆಚ್ಚಿನ ಅಮೆರಿಕನ್‌ ಪ್ರಜೆಗಳು ಆಶಯ ವ್ಯಕ್ತಪಡಿಸಿರುವುದಾಗಿ ಪೊಲಿಟಿಕೋ-ಜಾರ್ಜ್‌ವಾಷಿಂಗ್ಟನ್ ಯೂನಿರ್ವಸಿಟಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

2012ರಲ್ಲಿ ಮತದಾನ ಮಾಡಲಿರುವ ಸುಮಾರು ಒಂದು ಸಾವಿರ ಮತದಾರರನ್ನು ಗುರುತಿಸಿ ಯೂನಿರ್ವಸಿಟಿ ಈ ಸಮೀಕ್ಷೆಯನ್ನು ನಡೆಸಿರುವುದಾಗಿ ಹೇಳಿದೆ. ಸುಮಾರು ಶೇ.44ರಷ್ಟು ಮಂದಿ ಒಬಾಮಾ ಹೊರತುಪಡಿಸಿ ಮತ ನೀಡಲು ನಿರ್ಧರಿಸಿದ್ದರೆ, ಅದಕ್ಕೆ ಪೂರಕ ಎಂಬಂತೆ ಶೇ.13ರಷ್ಟು ಬೇರೊಬ್ಬ ಅಭ್ಯರ್ಥಿಗೆ ಮತ ನೀಡುವುದಾಗಿ ಹೇಳಿದ್ದಾರೆ.

2008ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಅವರು ಶೇ.53ರಷ್ಟು ಮತಗಳಿಸಿದ್ದರು. ಇದೀಗ ಬರಾಕ್ ಅಧ್ಯಕ್ಷರಾಗಿ ಎರಡು ವರ್ಷ ಕಳೆದ ನಂತರ ಅವರ ಜನಪ್ರಿಯತೆ ಕುಸಿಯುತ್ತಿರುವುದು ಸ್ಪಷ್ಟವಾಗಿದೆ.

ಶೇ.63ರಷ್ಟು ಮಂದಿ ದೇಶ ತಪ್ಪು ಹಾದಿಯಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರೆ, ಶೇ.51ರಷ್ಟು ಅಮೆರಿಕನ್‌ರು ಒಬಾಮಾ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಶೇ.65ರಷ್ಟು ಜನರು ಶ್ವೇತಭವನದಲ್ಲಿ ಒಬಾಮಾ ಅವರ ಆಡಳಿತ ವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ