ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುಎಇಯಲ್ಲಿನ ವಿದೇಶಿ ನೌಕರರ ನಿಯಮಾವಳಿ ಸಡಿಲಿಕೆ (UAE | expatriate workers | Gulf nation | Nasser Al Awadi Al Menhali)
Bookmark and Share Feedback Print
 
ವಲಸೆ ಕಾರ್ಮಿಕರು ನಿಟ್ಟುಸಿರುವ ಬಿಡುವಂತಹ ಹಲವು ಕ್ರಮಗಳಿಗೆ ಸಂಯುಕ್ತ ಅರಬ್ ಸಂಸ್ಥಾನ ಮುಂದಾಗಿದೆ. ಗಲ್ಫ್ ರಾಷ್ಟ್ರದಲ್ಲಿ ವಿದೇಶಿ ಕೆಲಸಗಾರರ ಮನೆಯವರು ತಂಗಲು ಅವಕಾಶ ನೀಡುವುದೂ ಸೇರಿದಂತೆ 57ಕ್ಕೂ ಹೆಚ್ಚುವರಿ ನಿಯಮಗಳನ್ನು ಜಾರಿಗೆ ತರಲಾಗಿದೆ.

ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನ ಕುಟುಂಬದ ಓರ್ವ ಸದಸ್ಯ ಇಲ್ಲಿ ತಂಗಬೇಕಾದರೆ 5,000 ದಿರ್ಹಾಮ್ (ಸುಮಾರು 60,000 ರೂಪಾಯಿ) ಠೇವಣಿ ಇಡಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಚಾಲಕರು, ಬೇಕರಿಗಳಲ್ಲಿ ಕೆಲಸ ಮಾಡುವವರು, ಟೈಲರುಗಳು ಮತ್ತು ಬಾಣಸಿಗರು ತಾವು ಎಷ್ಟೇ ಸಂಪಾದಿಸುತ್ತಿದ್ದರೂ, ತಮ್ಮ ಕುಟುಂಬದ ಸದಸ್ಯರನ್ನು ಗಲ್ಫ್ ರಾಷ್ಟ್ರದಲ್ಲಿ ಇರಲು ಅವಕಾಶವಿರಲಿಲ್ಲ. ಆದರೆ ಈಗ ಅವರು ಸೂಕ್ತ ಠೇವಣಿ ಇಟ್ಟಲ್ಲಿ ಅವರ ಕುಟುಂಬದ ಸದಸ್ಯರನ್ನು ಇಲ್ಲಿಗೆ ಕರೆ ತರಬಹುದಾದಂತಹ ನಿಯಮಗಳನ್ನು ರೂಪಿಸಿದ್ದೇವೆ ಎಂದು ಆಂತರಿಕ ಸಚಿವಾಲಯದ ಪೌರತ್ವ, ವಸತಿ ಮತ್ತು ಆಶ್ರಯ ವ್ಯವಹಾರಗಳ ಸಹಾಯಕ ಆಧೀನ ಕಾರ್ಯದರ್ಶಿ ಮೇಜರ್ ಜನರಲ್ ನಾಸಿರ್ ಅಲ್ ಅವಾಡಿ ಅಲ್ ಮೆನ್ಹಾಲಿ ತಿಳಿಸಿದ್ದಾರೆ.

ಈಗ ವೆಲ್ಡರುಗಳು, ಕಮ್ಮಾರರು, ಅಕ್ಕಸಾಲಿಗರು, ಪ್ಲಂಬರುಗಳು, ಮೆಕಾನಿಕ್‌ಗಳು, ಧೋಬಿವಾಲಾಗಳು, ಕಾರು ತೊಳೆಯುವವರು, ದಿನಸಿ ವ್ಯಾಪಾರಿಗಳು, ಸೇಲ್ಸ್ ಬಾಯ್ಸ್-ಗರ್ಲ್ಸ್, ಕಸಾಯಿಖಾನೆಯಲ್ಲಿ ಕೆಲಸ ಮಾಡುವವರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು ಕೂಡ ತಮ್ಮ ಮನೆಯವರನ್ನು ಗಲ್ಫ್ ರಾಷ್ಟ್ರಗಳಿಗೆ ಕರೆ ತರಬಹುದಾಗಿದೆ ಎಂದು ಅಧಿಕಾರಿ ವಿವರಣೆ ನೀಡಿದ್ದಾರೆ.

ಅರಬ್ ರಾಷ್ಟ್ರದಲ್ಲಿ ಶಾಲಾ ಶುಲ್ಕ ಮತ್ತು ವಸತಿ ಶುಲ್ಕ ತುಟ್ಟಿಯಾದರೂ, ಇದೀಗ ಕೆಲವು ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಜಾಗತಿಕ ಆರ್ಥಿಕ ಹಿನ್ನಡೆಯನ್ನು ಅನುಭವಿಸಿದ್ದ ಯುಎಇ (ಅಬುಧಾಬಿ, ದುಬೈ, ಶಾರ್ಜಾ, ಅಜ್ಮನ್, ಉಮ್ ಅಲ್ ಖ್ವಾಯಿನ್, ರಸ್ ಅಲ್-ಖೈಮಾ ಮತ್ತು ಫುಜೈರಾ ರಾಜ್ಯಗಳು) ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ