ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: 20 ಬ್ರಿಟನ್ ಯುವಕರಿಗೆ ಅಲ್ ಖಾಯಿದಾ ತರಬೇತಿ! (British Muslims | terror training | al Qaeda | Pakistan | Mumbai-style attacks)
Bookmark and Share Feedback Print
 
ಬ್ರಿಟನ್‌, ಜರ್ಮನ್, ಲಂಡನ್‌ನ ಪ್ರಮುಖ ನಗರಗಳ ಮೇಲೆ ಮುಂಬೈ ಮಾದರಿಯ ಭಯೋತ್ಪಾದನಾ ದಾಳಿ ನಡೆಸುವ ನಿಟ್ಟಿನಲ್ಲಿ ಸುಮಾರು 20 ಮಂದಿ ಮುಸ್ಲಿಮ್ ಯುವಕರಿಗೆ ಪಾಕಿಸ್ತಾನದಲ್ಲಿ ಅಲ್ ಖಾಯಿದಾ ಕ್ಯಾಂಪ್‌ನಲ್ಲಿ ಉಗ್ರಗಾಮಿ ತರಬೇತಿ ನೀಡುತ್ತಿರುವುದಾಗಿ ಮಾಧ್ಯಮದ ವರದಿಯೊಂದು ಗುರುವಾರ ಬಹಿರಂಗಪಡಿಸಿದೆ.

20 ಮಂದಿ ಯುವಕರು ಬ್ರಿಟನ್ ಪಾಸ್‌ಪೋರ್ಟ್ ಹೊಂದಿದ್ದು, ಅವರೆಲ್ಲ ಜಂಗಲ್ ರಾಜ್ ಆಗಿರುವ ಪಾಕಿಸ್ತಾನದ ಬುಡಕಟ್ಟು ಪ್ರದೇಶಕ್ಕೆ ತೆರಳಿ ಅಲ್ ಖಾಯಿದಾ ಮತ್ತು ಅಲ್ ಖಾಯಿದಾ ಬೆಂಬಲಿತ ಉಗ್ರಗಾಮಿ ಶಿಬಿರದಲ್ಲಿ ಭಯೋತ್ಪಾದನಾ ತರಬೇತಿಯಲ್ಲಿ ಪಾಲ್ಗೊಂಡಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ತಿಳಿಸಿದೆ.

ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ವರದಿ ಮಾಡಿರುವ ಪತ್ರಿಕೆ, 20 ಮಂದಿಗೆ ಗುಂಡು ಹಾರಾಟ, ಬಾಂಬ್ ಸ್ಫೋಟ ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತಿದೆ. ಉಗ್ರರ ಶಿಬಿರದಲ್ಲಿ ಬ್ರಿಟನ್‌ನ 15-20 ಯುವಕರಿಗೆ ತರಬೇತಿ ನೀಡಲಾಗುತ್ತಿರುವುದಾಗಿ ಗುಪ್ತಚರ ಇಲಾಖೆಯ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ವಿವರಿಸಿರುವುದಾಗಿ ವರದಿ ಹೇಳಿದೆ.

ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿಯ ಪ್ರಮುಖ ನಗರಗಳ ಮೇಲೆ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಮುಂಬೈ ಮಾದರಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಬಹಿರಂಗಪಡಿಸಿತ್ತು. ಅಲ್ಲದೇ ಅವರಿಗೆಲ್ಲ ಪಾಕಿಸ್ತಾನಿ ಮೂಲದ ಉಗ್ರಗಾಮಿ ಸಂಘಟನೆ ತರಬೇತಿ ನೀಡಿರುವುದಾಗಿಯೂ ಹೇಳಿತ್ತು. ಇದೀಗ ಬ್ರಿಟನ್‌ನಿಂದಲೇ 20 ಮಂದಿ ಯುವಕರಿಗೆ ಅಲ್ ಖಾಯಿದಾ ತರಬೇತಿ ನೀಡುತ್ತಿರುವ ಆಘಾತಕಾರಿ ಅಂಶವನ್ನು ಹೊರಗೆಡಹಿದೆ.
ಸಂಬಂಧಿತ ಮಾಹಿತಿ ಹುಡುಕಿ