ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಾಂಧಿ-ಮಾರ್ಟಿನ್ ಲೂಥರ್ ಬರಾಕ್ ಜೀವನದ ಹೀರೋಗಳು! (Mahatma Gandhi | Barack Obama | non-violence | autobiography)
Bookmark and Share Feedback Print
 
ಮಹಾತ್ಮ ಗಾಂಧೀಜಿ ಅವರ ಆತ್ಮಚರಿತ್ರೆ ಹಾಗೂ ಅಹಿಂಸೆಯ ಮೂಲಕ ಸಾಮಾಜಿಕ ನ್ಯಾಯದ ಅವರ ಬೋಧನೆಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೀವನ ರೂಪಿಸಿಕೊಳ್ಳಲು ನೆರವು ನೀಡಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಪ್ರಪ್ರಥಮ ಆಫ್ರಿಕಾ ಮೂಲದ ಕಪ್ಪು ಜನಾಂಗದ ಅಧ್ಯಕ್ಷ ಒಬಾಮಾ ಅವರು ಈ ತತ್ವಗಳಿಗೆ ನಿಷ್ಠರಾಗಿದ್ದು, ಗಾಂಧೀಜಿ ಅವರ ಆತ್ಮಚರಿತ್ರೆ ಹಾಗೂ ಟೇಲರ್ ಬ್ರಾಂಚ್ ವಿರಚಿತ ಮಾರ್ಟಿನ್ ಲೂಥರ್ ಕಿಂಗ್ ಅವರ ಜೀವನ ಚರಿತ್ರೆಯ ಮೂರು ಸಂಪುಟಗಳು ಅವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಅಮೆರಿಕ ವಿದೇಶಾಂಗ ಇಲಾಖೆ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ಹೇಳಿದ್ದಾರೆ.

ಮಹಾತ್ಮ ಗಾಂಧಿ ಮತ್ತು ಕಿಂಗ್ ತನ್ನ ಹೀರೋಗಳು ಎಂಬುದಾಗಿ ಒಬಾಮಾ ಅವರು ಪದೇ, ಪದೇ ಗುರುತಿಸಿರುವುದಾಗಿ ಬ್ಲೇಕ್ ಕ್ಯಾಲಿಫೋರ್ನಿಯಾದ ಸ್ಯಾನ್‌ಡಿಯಾಗೋ ಸ್ಟೇಟ್ ಯೂನಿರ್ವಸಿಟಿಯಲ್ಲಿ ನೀಡಿದ ವಾರ್ಷಿಕ ಮಹಾತ್ಮಗಾಂಧಿ ಉಪನ್ಯಾಸದಲ್ಲಿ ತಿಳಿಸಿದರು.

ತನ್ನ ಜೀವನದಲ್ಲಿಯೂ ಬರಾಕ್ ಗಾಂಧಿ ಅವರ ಅಹಿಂಸೆಯ ತತ್ವಾದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯ ತತ್ವಗಳಿಂದ ಬಹಳಷ್ಟು ಪ್ರಭಾವಿತರೂ ಆಗಿದ್ದಾರೆ. ಭವಿಷ್ಯದಲ್ಲಿ ಮಹತ್ತರವಾದ ಬದಲಾವಣೆ ತರಲು ಗಾಂಧಿ, ಕಿಂಗ್ ತತ್ವಗಳು ಸಹಕಾರಿಯಾಗಲಿವೆ ಎಂಬ ನಂಬಿಕೆ ಬರಾಕ್ ಅವರದ್ದು ಎಂದು ಬ್ಲೇಕ್ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ