ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಹ್ಯಾಕಾಶದಲ್ಲಿ ಮತ್ತೊಂದು ಪೃಥ್ವಿ; ಮಾನವ ಬದುಕಬಹುದೇ? (New planet | Glieses 581g | Glieses 581 | Goldilock)
Bookmark and Share Feedback Print
 
PR
ಅಂದಾಜು ಮಾಡಲು ಕೂಡ ಅಸಾಧ್ಯವಾಗಿರುವ ಬ್ರಹ್ಮಾಂಡದಲ್ಲಿ ಏನೆಲ್ಲ ಅಡಗಿದೆಯೋ? ಈ ನಿಟ್ಟಿನಲ್ಲಿ ಸಾವಿರಾರು ವಿಜ್ಞಾನಿಗಳು ಅವಿರತವಾಗಿ ಸಂಶೋಧನೆಗಳನ್ನು ನಡೆಸಿದರೂ, ಅದಕ್ಕೊಂದು ಅಂತ್ಯವೆನ್ನುವುದನ್ನು ಹಾಡಲು ಸಾಧ್ಯವಾಗಿಲ್ಲ. ಅಂತೆಯೇ ಇದೀಗ ಹೊಸತೊಂದು ಗ್ರಹ ಪತ್ತೆಯಾಗಿದೆ. ವಿಶೇಷವೆಂದರೆ ಈ ಗ್ರಹದಲ್ಲಿ ಮನುಷ್ಯ ಜೀವಿಸುವ ವಾತಾವರಣವಿರುವ ಸಾಧ್ಯತೆಗಳಿವೆ ಎನ್ನುವುದು.

ಈ ಗ್ರಹಕ್ಕೆ ಇಡಲಾಗಿರುವ ಹೆಸರು Gliese 581g ಎಂದು. ಇದುವರೆಗೆ ಭೂಮಿಯನ್ನು ಹೊರತುಪಡಿಸಿ ಇನ್ನಿತರ ಗ್ರಹಗಳಲ್ಲಿ ಜೀವಿಗಳನ್ನು ಪತ್ತೆ ಹಚ್ಚಲು ಮಾನವನಿಗೆ ಸಾಧ್ಯವಾಗದೆ ಇರುವ ಕಾರಣ ಅನ್ಯ ಗ್ರಹಗಳಲ್ಲಿ ಜೀವಿಗಳೇ ಇಲ್ಲ ಎಂದು ವಾದಿಸಿಕೊಂಡು ಬಂದಿದ್ದಾನೆ. ಆದರೆ ಈಗ ಕಣ್ಣಿಗೆ ಬಿದ್ದಿರುವ ಗ್ರಹವು ವಿಜ್ಞಾನಿಗಳ ಗ್ರಹಣ ಬಿಡಿಸುವ ಸಾಧ್ಯತೆಗಳಿವೆ.

ಇಂತಹ ಸಾಧನೆಯನ್ನು ಮಾಡಿರುವುದು ಅಮೆರಿಕಾದ ವಾಷಿಂಗ್ಟನ್‌ನಲ್ಲಿನ ಕಾರ್ನೆಗಿ ಇನ್ಸ್‌ಟಿಟ್ಯೂಟ್‌ನ ವಿಜ್ಞಾನಿಗಳು. 'ಗೋಲ್ಡಿಲಾಕ್ಸ್' ನಕ್ಷತ್ರಪುಂಜದಲ್ಲಿರುವ Gliese 581 ಎಂಬ ದೊಡ್ಡ ನಕ್ಷತ್ರವೊಂದಕ್ಕೆ ಈ ಗ್ರಹ (Gliese 581g) ಸುತ್ತು ಹಾಕುತ್ತಿದೆ, ಇದರಲ್ಲಿ ಜೀವಿಗಳಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Gliese 581g ಗ್ರಹವು ಹೆಚ್ಚು ಉಷ್ಣತೆಯನ್ನು ಹೊಂದಿರದೆ, ಹೆಚ್ಚು ಶೀತ ಹವೆಯನ್ನೂ ಹೊಂದಿರದೆ ವಾಸಯೋಗ್ಯ ವಾತಾವರಣವನ್ನು ಹೊಂದಿದೆ. ಅಲ್ಲದೆ ಅದು ತನ್ನ ನಕ್ಷತ್ರದಿಂದ (Gliese 581) ಬಹಳ ದೂರ ಅಥವಾ ಹತ್ತಿರದಲ್ಲಿರದ (14 ದಶಲಕ್ಷ ಮೈಲು) ಕಾರಣ ಅಲ್ಲಿ ನೀರು ಇರಬಹುದು.
PR


ಗ್ರಹವು ಭಾರೀ ಗಾತ್ರವನ್ನೂ ಹೊಂದಿಲ್ಲ (ಭೂಮಿಗಿಂತ ಮೂರು ಪಟ್ಟು ದೊಡ್ಡದು) ಅಥವಾ ತೀರಾ ಚಿಕ್ಕದೂ ಅಲ್ಲ. ಸೂಕ್ಷ್ಮವಾದ ಮೇಲ್ಮೈ ಗುರುತ್ವಾಕರ್ಷಣೆ ಮತ್ತು ವಾತಾವರಣವನ್ನು ಹೊಂದಿರುವುದು ಕಂಡು ಬಂದಿದೆ. ಬಹುತೇಕ ಭೂಮಿಯಂತೆಯೇ ಭಾಸವಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂದ ಹಾಗೆ Gliese 581g ಗ್ರಹವು ಭೂಮಿಯಲ್ಲಿರುವಂತೆ ತಿಂಗಳಿಗೆ 30 ದಿನಗಳನ್ನು ಹೊಂದಿರಲು ಸಾಧ್ಯವಿಲ್ಲ. ಏಕೆಂದರೆ ಇದು ತನ್ನ ಸೂರ್ಯನಿಗೆ 37 ದಿನಗಳಿಗೆ ಒಂದು ಸುತ್ತನ್ನು ಹಾಕುತ್ತಿದೆ. ಒಂದು ಪಾರ್ಶ್ವವು ಕತ್ತಲಾಗಿ, ಮತ್ತೊಂದು ಬದಿ ಪ್ರಕಾಶಮಾನವಾಗಿ ಕಾಣುವುದು ಇದರ ಮತ್ತೊಂದು ವಿಶೇಷ.

ಈ ಗ್ರಹದಲ್ಲಿ ನೀರು ಅಥವಾ ನೀರಿನ ಅಂಶ ಇರುವುದು ರುಜುವಾತಾಗಿಲ್ಲ. ಆದರೆ ಅಲ್ಲಿನ ಪರಿಸ್ಥಿತಿಯು ದ್ರವರೂಪದ ಪರಿಸ್ಥಿತಿಗೆ ಅಥವಾ ಅದರ ಅಸ್ತಿತ್ವಕ್ಕೆ ಪೂರಕವಾಗಿರುವುದರಿಂದ ಅಲ್ಲೂ ಜೀವಿಗಳು ಇರಬಹುದು. ಗ್ರಹದ ಮೇಲ್ಮೈಯಲ್ಲಿ ಗರಿಷ್ಠ 71 ಡಿಗ್ರಿ ಸೇಲ್ಸಿಯಸ್ ಮತ್ತು ಕನಿಷ್ಠ 4 ಡಿಗ್ರಿ ಸೇಲ್ಸಿಯಸ್ ಉಷ್ಣಾಂಶವಿದೆ. ಇಂತಹ ವಾತಾವರಣದಲ್ಲಿ ಜೀವಿಗಳ ಉಗಮ ಸಾಧ್ಯತೆಯಿದೆ ಎಂಬುದು ವಿಜ್ಞಾನಿಗಳ ಬಲವಾದ ನಂಬಿಕೆ.

ಹಾಗೊಂದು ವೇಳೆ Gliese 581g ಗ್ರಹದಲ್ಲಿ ಮನುಷ್ಯ ವಾಸಿಸಲು ಯೋಗ್ಯ ಎಂಬುದು ಸಾಬೀತಾದರೂ, ಅಲ್ಲಿಗೆ ತೆರಳುವುದಂತೂ ಕನಸಿನ ಮಾತಾಗುತ್ತದೆ. ಯಾಕೆಂದರೆ ಅಂದಾಜುಗಳ ಪ್ರಕಾರ ಭೂಮಿಯಿಂದ ಅಲ್ಲಿಗೆ ತೆರಳಲು ಬೇಕಾಗುವ ಕಾಲಾವಕಾಶ (20 ಜ್ಯೋತಿರ್ವರ್ಷಗಳು) ಸುಮಾರು 20 ವರ್ಷಗಳು.
ಸಂಬಂಧಿತ ಮಾಹಿತಿ ಹುಡುಕಿ