ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್‌ಗೆ ಮೆದುಳೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿರುವ ಪಾಕ್ ಮಿಲಿಟರಿ ಮಾಜಿ ವರಿಷ್ಠ ಪರ್ವೆಜ್ ಮುಷರ್ರಫ್, ನವಾಜ್ ಓರ್ವ ವಿಫಲ ನಾಯಕ ಎಂದು ಆರೋಪಿಸಿದ್ದಾರೆ.
ಲಂಡನ್‌ನಲ್ಲಿ ಮುಷ್ ನೂತನ ಪಕ್ಷಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, 2013ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
1999ರಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಶರೀಫ್ ಅವರನ್ನು ಕೆಳಗಿಳಿಸುವ ಮೂಲಕ ಮುಷರ್ರಫ್ ಅಧಿಕಾರದ ಗದ್ದುಗೆ ಏರಿದ್ದರು. ನಾನು ನವಾಜ್ ಜೊತೆ ಆ ಸಂದರ್ಭದಲ್ಲಿ ಒಟ್ಟಾಗಿಯೇ ಕಾರ್ಯನಿರ್ವಹಿಸಿದ್ದೆ. ಆದರೆ ನವಾಜ್ ಸಂಪೂರ್ಣ ಮೆದುಳು ರಹಿತ ವ್ಯಕ್ತಿ ಎಂದು ಬ್ರಿಟನ್‌ನಲ್ಲಿ ನಡೆದ ರಾಲಿಯೊಂದರಲ್ಲಿ ಮಾತನಾಡುತ್ತ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್ ಮುಖ್ಯಸ್ಥರಾಗಿರುವ ಶರೀಫ್ ಅವರು ಖಾಸಗಿ ಚಾನೆಲ್‌ಗಳಲ್ಲಿ ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದ ಇರಲಿ ಎಂದು ಸಲಹೆ ನೀಡಿರುವುದಾಗಿ ದಿ ನ್ಯೂಸ್ ವರದಿ ತಿಳಿಸಿದೆ.
2008ರಲ್ಲಿ ತೀವ್ರ ಒತ್ತಡದ ನಂತರ ಮುಷರ್ರಫ್ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದ ನಂತರ ಸ್ವಯಂ ಗಡಿಪಾರಿನೊಂದಿಗೆ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಷ್ ಅವರ ನೂತನ ಪಕ್ಷ ಚಾಲನೆ ದೊರೆತ ನಂತರ ಬರ್ಮಿಂಗ್‌ಹ್ಯಾಮ್‌ನಲ್ಲಿ ತಮ್ಮ ಬೆಂಬಲಿಗರ ರಾಲಿಯಲ್ಲಿ ಮುಷ್ ಮಾತನಾಡಿದರು.