ಕ್ವೆಟ್ಟಾ: ಅಫಘಾನಿಸ್ತಾನದಲ್ಲಿ ನ್ಯಾಟೋ ಪಡೆಗಳಿಗೆ ತೈಲ ಪೂರೈಸುತ್ತಿದ್ದ 10ಕ್ಕೂ ಹೆಚ್ಚು ಟ್ಯಾಂಕರುಗಳಿಗೆ ಬೆಂಕಿ ಹಚ್ಚಿರುವ ಬಂದೂಕುಧಾರಿಗಳು, ಓರ್ವ ಚಾಲಕನನ್ನು ಕೊಂದು ಹಾಕಿದ್ದಾರೆ. ಅಫ್ಘಾನ್ ಜತೆಗಿನ ಪ್ರಮುಖ ಗಡಿಯೊಂದನ್ನು ಪಾಕಿಸ್ತಾನ ಮುಚ್ಚಿದ ನಂತರ ನಡೆಯುತ್ತಿರುವ ಆರನೇ ದಾಳಿಯಿದು ಎಂದು ವರದಿಗಳು ಹೇಳಿವೆ.