ಹಠಾತ್ ಪ್ರವಾಹಕ್ಕೆ 75 ಬಲಿ

ಇಂಡೋನೇಷಿಯಾ: ಇಂಡೋನೇಷಿಯಾದ ಪೂರ್ವ ಭಾಗದಲ್ಲಿ ದಿಢೀರ್ ಪ್ರವಾಹ ಉಂಟಾದ ಪರಿಣಾಮದಿಂದ ಕನಿಷ್ಠ 75 ಮಂದಿ ಸಾವನ್ನಪ್ಪಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಭೂಕುಸಿತಗಳು ಸಂಭವಿಸಿವೆ. ಬೆಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಹೆಚ್ಚಿನ ಹಾನಿಯುಂಟಾಗಿದೆ ಎಂದು ವರದಿಗಳು ಹೇಳಿವೆ.