ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುರ್ಖಾ ಧರಿಸಲು ಒತ್ತಡ ಹೇರುವಂತಿಲ್ಲ: ಬಾಂಗ್ಲಾ ಹೈಕೋರ್ಟ್ (Bangladesh | secular | High Court | burqa | Dhaka)
Bookmark and Share Feedback Print
 
ಬಾಂಗ್ಲಾ ಜಾತ್ಯತೀತ ದೇಶವಾಗಿದೆ ಆ ನಿಟ್ಟಿನಲ್ಲಿ ಯಾರೊಬ್ಬರು ಮುಸ್ಲಿಮ್ ಮಹಿಳೆಗೆ ಬುರ್ಖಾ ಧರಿಸುವಂತೆ ಒತ್ತಾಯಪಡಿಸುವಂತಿಲ್ಲ ಎಂದು ಬಾಂಗ್ಲಾದೇಶ ಹೈಕೋರ್ಟ್ ತೀರ್ಪು ನೀಡಿದೆ.

ಈ ಬಗ್ಗೆ ಆಗೋಸ್ಟ್ ತಿಂಗಳಿನಲ್ಲಿಯೇ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಬಿಬಿಬಿ ವರದಿ ಮಾಡಿದ್ದು, ಸಾರ್ವಜನಿಕ ಸ್ಥಳವಾಗಲಿ, ಶಾಲಾ-ಕಾಲೇಜುಗಳಲ್ಲಿ ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸಲೇಬೇಕೆಂದು ಬಲವಂತಪಡಿಸಬಾರದು ಎಂದು ಸ್ಪಷ್ಟಪಡಿಸಿರುವುದಾಗಿ ಹೇಳಿದೆ.

ದೇಶದ ಸಂವಿಧಾನದ ಆಶಯದಂತೆ ಬಾಂಗ್ಲಾ ಜಾತ್ಯತೀತ ರಾಷ್ಟ್ರವಾಗಿದೆ. ಸಂವಿಧಾನದ ಐದನೇ ತಿದ್ದುಪಡಿಯಂತೆಯ ಹಿನ್ನೆಲೆಯಲ್ಲಿ ಈ ತೀರ್ಪನ್ನು ನೀಡಿರುವುದಾಗಿ ಕೋರ್ಟ್ ತಿಳಿಸಿದೆ.

ಜಾತ್ಯತೀತತೆ ಕೂಡ ಸಂವಿಧಾನದ ನಾಲ್ಕು ನಿಯಮಗಳಲ್ಲಿ ಒಂದಾಗಿದೆ. ಆ ನೆಲೆಯಲ್ಲಿ ದೇಶದಲ್ಲಿ ಯಾರೊಬ್ಬರೂ ಬುರ್ಖಾ ಧರಿಸಲು ಒತ್ತಡ ಹೇರುವುದು ಸರಿಯಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಹೈಕೋರ್ಟ್‌ನ ನ್ಯಾಯಾಧೀಶರಾದ ಎಎಚ್ಎಂ ಶಂಶುದ್ದೀನ್ ಚೌಧುರಿ ಮತ್ತು ಶೇಕ್ ಮೊಹಮ್ಮದ್ ಜಾಕಿರ್ ಹುಸೈನ್ ತೀರ್ಪನ್ನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ