ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ರಾಜಕೀಯ ಅಸ್ಥಿರತೆ ನಿವಾರಣೆ ಮತ್ತು ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಹೊಸದೊಂದು ವೇದಿಕೆ ಸಿದ್ದವಾಗಿದೆ ಎಂಬಂತೆ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಮತ್ತು ತಾಲಿಬಾನ್ ಮುಖಂಡರು ರಹಸ್ಯವಾಗಿ ಮಾತುಕತೆ ನಡೆಸಿರುವುದಾಗಿ ವಾಷಿಂಗ್ಟನ್ ಪೋಸ್ಟ್‌ನ ಲೇಖನವೊಂದು ಬಹಿರಂಗಪಡಿಸಿದೆ.
ತಾಲಿಬಾನ್ ಸಂಘಟನೆಯ ಮುಖಂಡರು ಕರ್ಜಾಯ್ ಜೊತೆ ರಹಸ್ಯವಾಗಿ ಉನ್ನತ ಮಟ್ಟದ ಮಾತುಕತೆ ನಡೆಸಿರುವುದಾಗಿ ಮೂಲವೊಂದು ತಿಳಿಸಿರುವುದಾಗಿ ಹೇಳಿದೆ.
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಅಫ್ಘಾನ್ ಸರಕಾರ ಈ ಮಾತುಕತೆಗೆ ಮುಂದಾಗಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ತಾಲಿಬಾನ್ ಜೊತೆ ಉಪಸ್ಥಿತಿ ಇಲ್ಲದೆ ಯಾವುದೇ ಮಾತುಕತೆ ನಡೆಸಬಾರದು ಎಂದು ಅಮೆರಿಕ ಈ ಮೊದಲು ಎಚ್ಚರಿಸಿತ್ತು.