ಇಸ್ಲಾಮಾಬಾದ್, ಶುಕ್ರವಾರ, 8 ಅಕ್ಟೋಬರ್ 2010( 13:24 IST )
'ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ....ಭ್ರಷ್ಟಾಚಾರ ಎಲ್ಲಿ ಇಲ್ಲ ಅಂತ ಹೇಳಿ'...ಹೀಗೆ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಸಚಿವರೊಬ್ಬರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೀತಿ ಇದು!
ನನ್ನ ಸಚಿವಾಲಯದಲ್ಲಿ ಭ್ರಷ್ಟಾಚಾರ ಇಲ್ಲ ಅಂತ ನಾನು ಹೇಳಲಾರೆ. ಆದರೆ ಮುಖ್ಯವಾಗಿ ಭ್ರಷ್ಟಾಚಾರ ಎಲ್ಲಿ ಇಲ್ಲ ಎಂಬುದಾಗಿದೆ ಎಂದು ಪಾಕ್ ರೈಲ್ವೆ ಸಚಿವ ಗುಲಾಂ ಅಹ್ಮದ್ ಬಿಲೌರ್ ತಿಳಿಸಿದ್ದಾರೆ.
ಅಸೆಂಬ್ಲಿಯಲ್ಲಿ ರೈಲ್ವೆ ಸಚಿವಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಕ್ ರೈಲ್ವೆ ಆರ್ಥಿಕ ಸ್ಥಿತಿ ತುಂಬಾ ಡೋಲಾಯಮಾನವಾಗಿದೆಯಲ್ಲ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಸಚಿವ ಗುಲಾಂ ಈ ರೀತಿ ಉತ್ತರ ನೀಡಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಅಸೆಂಬ್ಲಿಯಲ್ಲಿ ಸದಸ್ಯರ ವಿರಳ ಹಾಜರಾತಿ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಪ್ರಸಕ್ತವಾಗಿ ದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ರೈಲ್ವೆ ಇಲಾಖೆ ಸುಮಾರು 7.696 ಬಿಲಿಯನ್ ಡಾಲರ್‌ನಷ್ಟು ನಷ್ಟ ಹೊಂದಿರುವುದಾಗಿ ಸದನದಲ್ಲಿ ಗುಲಾಂ ವಿವರಣೆ ನೀಡಿದರು.