ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಪಡೆ ವಿರುದ್ಧ ಉಗ್ರರ ಹೋರಾಟಕ್ಕೆ ಐಎಸ್ಐ ಕುಮ್ಮಕ್ಕು (Afghanistan | US troops | ISI | Taliban | American)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಿಸುತ್ತಿರುವ ಅಮೆರಿಕ ಮತ್ತು ಮಿತ್ರ ಪಡೆಗಳ ಮೇಲೆ ತಾಲಿಬಾನ್ ದಾಳಿ ನಡೆಸುವಂತೆ ಐಎಸ್ಐ ಕುಮ್ಮಕ್ಕು ನೀಡುತ್ತಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರನ್ನು ಮಟ್ಟಹಾಕಲು ಪಾಕಿಸ್ತಾನ ಶಕ್ತಿಮೀರಿ ಶ್ರಮಿಸುತ್ತಿಲ್ಲ ಎಂದು ಅಮೆರಿಕ ಶ್ವೇತಭವನ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲವೊಂದು ತಿಳಿಸಿರುವುದಾಗಿ ವರದಿ ಹೇಳಿದೆ.

ಈ ಮೊದಲು ಐಎಸ್ಐ ಸಾಕಷ್ಟು ತಪ್ಪುಗಳನ್ನು ಎಸಗಿತ್ತು. ಆದರೆ ಇದೀಗ ಅಮೆರಿಕ, ಭಾರತದ ಎಚ್ಚರಿಕೆಯ ನಂತರವೂ ಐಎಸ್ಐ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸಲು ತಾಲಿಬಾನ್ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವುದಾಗಿ ದಿ ವಾಲ್ ಸ್ಟ್ರೀಟ್ ಜರ್ನಲ್ ದೂರಿದೆ.

ಉಗ್ರಗಾಮಿಗಳು ಯಾವುದೇ ಕಾರಣಕ್ಕೂ ಶರಣಾಗಬಾರದು ಎಂದು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸೂಚನೆ ನೀಡಿರುವುದಾಗಿಯೂ ಕೆಲವು ತಾಲಿಬಾನ್ ಮುಖಂಡರು ಮತ್ತು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಯಾರು ಐಎಸ್ಐ ಆದೇಶವನ್ನು ಪಾಲಿಸುವುದಿಲ್ಲವೋ ಅಂತಹ ಕಮಾಂಡರ್ ಅನ್ನು ಐಎಸ್ಐ ಸೆರೆಹಿಡಿಯುತ್ತಿರುವುದಾಗಿ ಕುನಾರ್ ಪ್ರಾಂತ್ಯದ ತಾಲಿಬಾನ್ ಮುಖಂಡನೊಬ್ಬನ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

'ಪೊಲೀಸ್, ಸೈನಿಕರು, ಇಂಜಿನಯರ್ಸ್, ಶಿಕ್ಷಕರು, ನಾಗರಿಕರು ಸೇರಿದಂತೆ ಎಲ್ಲರನ್ನೂ ಕೊಲ್ಲುವುದು ಐಎಸ್ಐನ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ತಾಲಿಬಾನ್ ಉಗ್ರರನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ