ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತಕ್ಕಿಂತ ಆಡಳಿತ ವೈಫಲ್ಯವೇ ಪಾಕ್‌ಗೆ ದೊಡ್ಡ ಶತ್ರು: ಮುಷ್ (Pervez Musharraf | Pakistan | India | Taliban | London | politics)
Bookmark and Share Feedback Print
 
ಪಾಕಿಸ್ತಾನಕ್ಕೆ ಪ್ರಸಕ್ತ ಸನ್ನಿವೇಶದಲ್ಲಿ ಭಾರತ ಅಥವಾ ತಾಲಿಬಾನ್‌ಕ್ಕಿಂತ ಆಡಳಿತ ವೈಫಲ್ಯವೇ ದೊಡ್ಡ ಶತ್ರುವಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ಮಾಜಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

'ನಾನು ಈ ಸಂದರ್ಭದಲ್ಲಿ ಹೇಳುವುದಾದರೆ ಆಡಳಿತ ವೈಫಲ್ಯವೇ ಪಾಕಿಸ್ತಾನಕ್ಕೆ ದೊಡ್ಡ ಶತ್ರುವಾಗಿದೆ ಎಂದು ಲಂಡನ್‌ನಲ್ಲಿ ತಾನು ಪಾಕಿಸ್ತಾನದ ಸಕ್ರಿಯ ರಾಜಕಾರಣಕ್ಕೆ ಶೀಘ್ರದಲ್ಲೇ ಮರಳುವುದಾಗಿ ತಿಳಿಸಿದ ಬೆನ್ನಲ್ಲೇ ಈ ಹೇಳಿಕೆಯನ್ನು ನೀಡಿದ್ದಾರೆ.

2008ರಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮುನ್ನ ಮುಶರ್ರಫ್ ಸ್ವಯಂಘೋಷಿತವಾಗಿ ಲಂಡನ್‌ಗೆ ಗಡಿಪಾರುಗೊಂಡಿದ್ದರು. ಆಡಳಿತ ವೈಫಲ್ಯದಿಂದಾಗಿ ಪಾಕಿಸ್ತಾನದಲ್ಲಿ ಭ್ರಷ್ಟಾಚಾರಕ್ಕೆ ಮುಕ್ತ ಹಾದಿ ಒದಗಿಸಿಕೊಟ್ಟಂತಾಗಿತ್ತು ಎಂದು ಮುಷ್ ಆರೋಪಿಸಿದ್ದಾರೆ.

ದೇಶಕ್ಕೆ ಸುಭದ್ರವಾದ ಆಡಳಿತ ನೀಡುವಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಂಪೂರ್ಣವಾಗಿ ವಿಫಲವಾಗಿರುವುದಾಗಿ ಭಾರತೀಯ ಪ್ರಕಾಶನದ ದಿ ವೀಕ್ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ