ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿಂಬಾಬ್ವೆ: ಅಯ್ಯೋ ಕಾಪಾಡಿ...ಮಹಿಳೆಯರಿಂದ್ಲೇ ಪುರುಷರ ರೇಪ್! (Zimbabwe | women raping men | ritual purposes | police)
Bookmark and Share Feedback Print
 
ಮಹಿಳೆ, ಯುವತಿಯರ ಮೇಲೆ ಅತ್ಯಾಚಾರ ನಡೆಯುವುದು ಸಾಮಾನ್ಯ, ಆದರೆ ವಿಪರ್ಯಾಸ ಎಂಬಂತೆ ಧಾರ್ಮಿಕ ವಿಧಿಗಾಗಿ ಮಹಿಳೆಯರು ಪುರುಷರನ್ನೇ ಅಪಹರಿಸಿ ಅತ್ಯಾಚಾರ ನಡೆಸುತ್ತಿರುವ ಘಟನೆ ಜಿಂಬಾಬ್ವೆಯಲ್ಲಿನ ಗಂಡಸರಿಗೆ ಆತಂಕ ಮೂಡಿಸಿದೆಯಂತೆ!

ಕಳೆದ ಹನ್ನೊಂದು ತಿಂಗಳಲ್ಲಿ ಆರು ಪುರುಷರು ಮಹಿಳೆಯರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರಂತೆ!ಅಷ್ಟೇ ಅಲ್ಲ ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ ಎಂಬುದು ಪೊಲೀಸರ ಶಂಕೆಯಾಗಿದೆ. ಈ ಘಟನೆಯಿಂದಾಗಿ ಪುರುಷರಿಗೆ ದಿಕ್ಕೇ ತೋಚದಂತ ಸ್ಥಿತಿ ನಿರ್ಮಾಣವಾಗಿದೆಯಂತೆ.

'ಮೂರು ಮಂದಿ ಮಹಿಳೆಯರಿದ್ದ ಮಿನಿಬಸ್‌ವೊಂದನ್ನು ನಿಲ್ಲಿಸಿ 26ರ ಹರೆಯದ ಪೊಲೀಸ್ ಕಾನ್ಸಸ್ಟೇಬಲ್‌ ಲಿಫ್ಟ್ ಕೇಳಿದ್ದರು. ಈ ಸಂದರ್ಭದಲ್ಲಿ ಆತ ಸೀಟ್‌ನಲ್ಲಿ ಕುಳಿತ ನಂತರ, ಏಕಾಏಕಿ ಮಹಿಳೆಯೊಬ್ಬಳು ಬಟ್ಟೆಯೊಂದರಲ್ಲಿ ಡ್ರಗ್ ಹಾಕಿ ಆತನ ಮೂಗಿಗೆ ಹಿಡಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿರುವುದಾಗಿ' ಕ್ರೋನಿಕಲ್ ದೈನಿಕ ವರದಿ ಮಾಡಿದೆ.

ಆತನಿಗೆ ಪ್ರಜ್ಞೆ ಮರಳಿದ ನಂತರ ಮೂರು ಮಹಿಳೆಯರು ಈತನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದು ಗಮನಕ್ಕೆ ಬಂದಿದ್ದು, ಬಳಿಕ ಈತ ನಗರದ ಹೊರವಲಯದಲ್ಲಿ ಬಿಟ್ಟು ಹೋಗಿರುವುದಾಗಿ ಪೊಲೀಸ್ ವಕ್ತಾರ ಬೆಕಿಮ್‌ಪಿಲೋ ನಡ್ಲೋವ್ ತಿಳಿಸಿದ್ದಾರೆ.

ಅದೇ ರೀತಿ ಇಲ್ಲಿನ ಹರಾರೆ, ಗ್ವೆರೂ ಮತ್ತು ಮಾಸ್ವಿಂಗೋ ಪ್ರದೇಶದಲ್ಲಿಯೂ ಗನ್‌ಪಾಯಿಂಟ್ ಮೂಲಕ ಬೆದರಿಸಿ ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೂ ನಡೆದಿದೆ ಎಂದು ವರದಿ ವಿವರಿಸಿದೆ. ಕಳೆದ ತಿಂಗಳು ಸಾಮಾನನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ 44ರ ಹರೆಯದ ವ್ಯಕ್ತಿಯೊಬ್ಬನ ಮೇಲೆ ಇಬ್ಬರು ಮಹಿಳೆಯರು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ.

ಹರಾರೆಯ ಸೆಂಟ್ರಲ್ ರೋಮನ್ ಕ್ಯಾಥೋಲಿಕ್ ಚರ್ಚ್‌ನೊಳಗೆ ಇಬ್ಬರು ಮಹಿಳೆಯರು 18ರ ಹರೆಯದ ಯುವಕನೊಬ್ಬನನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿರುವುದಾಗಿ ವರದಿ ತಿಳಿಸಿದೆ. ಈ ಎಲ್ಲಾ ಘಟನೆಗಳಲ್ಲಿಯೂ ಮಹಿಳೆಯರು ಪುರುಷರಿಗೆ ಡ್ರಗ್ ನೀಡಿ, ನಂತರ ಕಾಂಡೋಮ್ ಉಪಯೋಗಿಸಿ ಅತ್ಯಾಚಾರ ನಡೆಸುತ್ತಿದ್ದರು ಎಂದು ವರದಿ ಹೇಳಿದೆ.

ಇದನ್ನೆಲ್ಲಾ ಹೆಚ್ಚಿನ ಮಹಿಳೆಯರು ಸಾಂಪ್ರದಾಯಿಕ ಹೀಲರ್ ನಿರ್ದೇಶನದ ಮೇರೆಗೆ ಧಾರ್ಮಿಕ ವಿಧಿಗಾಗಿ ಪುರುಷರ ವೀರ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆನ್ನಲಾಗಿದೆ. ಬಡತನದಲ್ಲಿ ಇರುವ ಮಹಿಳೆಯರು ಹಣಕ್ಕಾಗಿ ಈ ಕೆಲಸ ಮಾಡುತ್ತಿರುವುದಾಗಿಯೂ ಜಿಂಬಾಬ್ವೆ ನ್ಯಾಷನಲ್ ಅಸೋಸಿಯೇಷನ್ ಆಫ್ ಟ್ರೇಡಿಶನಲ್ ಹೀಲರ್ಸ್ ಮಾಜಿ ಮುಖ್ಯಸ್ಥ ಗೋರ್ಡನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ