ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಉಗ್ರರಿಗೆ ತರಬೇತಿ ನೀಡಿಲ್ಲ: ಉಲ್ಟಾ ಹೊಡೆದ ಮುಷ್! (Pervez Musharraf | Pakistan | militant groups | London | U-turn,)
Bookmark and Share Feedback Print
 
ಹೇಳಿಕೆಗಳನ್ನು ತಿರುಚುವುದು ರಾಜಕಾರಣಿಗಳಿಗೆ ಕರಗತವಾದ ಕಲೆ ಎಂಬಂತೆ, ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನ ಭೂಗತ ಉಗ್ರಗಾಮಿ ಸಂಘಟನೆಗಳಿಗೆ ತರಬೇತಿ ನೀಡಿದ್ದು ಸತ್ಯ ಎಂದು ಪಾಕ್ ಮಿಲಿಟರಿ ಮಾಜಿ ಮುಖ್ಯಸ್ಥ ಪರ್ವೆಜ್ ಮುಷರ್ರಫ್ ಒಪ್ಪಿಕೊಂಡ ಬೆನ್ನಲ್ಲೇ ಉಲ್ಟಾ ಹೊಡಿದ್ದು, ದೇಶದಲ್ಲಿರುವ ಎಲ್ಲಾ ಉಗ್ರಗಾಮಿ ಸಂಘಟನೆಗಳು ಸ್ವಯಂ ಆಗಿಯೇ ತರಬೇತಿ ಪಡೆದು ಕಾರ್ಯಾಚರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಎಲ್ಲಾ ಮುಜಾಹಿದೀನ್ ಸಂಘಟನೆಗಳು ಸ್ವಯಂ ಆಗಿಯೇ ಸಂಘಟಿತವಾಗಿ ತರಬೇತಿ ಪಡೆಯುತ್ತಿವೆ. ಆದರೆ ನಾನು ಯಾವತ್ತೂ ಪಾಕಿಸ್ತಾನವೇ ಭೂಗತ ಉಗ್ರಗಾಮಿ ಸಂಘಟನೆಗಳಿಗೆ ತರಬೇತಿ ನೀಡಿದೆ ಅಂತ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮುಷರ್ರಫ್ ಭಾರತೀಯ ಚಾನೆಲ್‌ವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಜರ್ಮನ್ ಮ್ಯಾಗಜಿನ್ ಡೆರ್ ಸ್ಪೈಗಲ್‌ಗೆ ಮುಷ್ ಅವರು ನೀಡಿದ ಸಂದರ್ಶನದಲ್ಲಿ, ಭಾರತದ ಕಾಶ್ಮೀರದಲ್ಲಿ ಹೋರಾಡಲು ಭೂಗತ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರುವುದಾಗಿ ತಿಳಿಸಿದ್ದರು. ಮುಷ್ ಹೇಳಿಕೆಗೆ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ತಾನೇ ನೀಡಿದ್ದ ಹೇಳಿಕೆಗೆ ಮುಷ್ ಉಲ್ಟಾ ಹೊಡೆದಿದ್ದಾರೆ.

ಪಾಕಿಸ್ತಾನದ ಮಿಲಿಟರಿಯಾಗಲಿ, ಗುಪ್ತಚರ ಇಲಾಖೆ ಅಥವಾ ಐಎಸ್ಐ ಮುಜಾಹಿದೀನ್ ಸಂಘಟನೆಗಳನ್ನು ಹುಟ್ಟುಹಾಕಿ ಅವುಗಳಿಗೆ ತರಬೇತಿ ನೀಡಿ ಕಳುಹಿಸುತ್ತಿದೆ ಎಂಬ ಪ್ರಶ್ನೆಯೇ ಇಲ್ಲ. ಯಾಕೆಂದರೆ ಅಂತಹ ಕೆಲಸ ಪಾಕಿಸ್ತಾನದಿಂದ ನಡೆಯುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ