ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2 ಅಮೆರಿಕನ್ನರಿಗೆ,1ಬ್ರಿಟನ್‌ ನಾಗರಿಕನಿಗೆ ಆರ್ಥಿಕ ನೊಬೆಲ್ ಪ್ರಶಸ್ತಿ (Nobel economics prize | Peter Diamond | Dale Mortensen | Christopher Pissarides)
Bookmark and Share Feedback Print
 
ಆರ್ಥಿಕ ನೀತಿಗಳಿಂದ ನಿರುದ್ಯೋಗಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವ ಲೇಖನಗಳನ್ನು ಮಂಡಿಸಿದ ಅಮೆರಿಕದ ಪೀಟರ್ ಡೈಮಂಡ್ ಮತ್ತು ದಲೆ ಮೊರ್ಟೆನ್ಸನ್ ಹಾಗೂ ಬ್ರಿಟನ್ ನಾಗರಿಕ ಕ್ರಿಸ್ಟೋಫರ್ ಪಿಸ್ಸಾರೈಡ್ಸ್‌ 2010ರ ಆರ್ಥಿಕ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸಂಶೋಧನೆಗಳಿಂದ ಹಾಗೂ ಮಾರುಕಟ್ಟೆಗಳ ವಿಮರ್ಷೆಗಳಿಂದಾಗಿ ರಾಯಲ್ ಸ್ವೀಢಿಷ್ ಅಕಾಡೆಮಿ ಆಫ್ ಸೈನ್ಸ್‌ಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ದೊರೆತಿದೆ ಎಂದು ಹೇಳಿಕೆ ನೀಡಿದೆ.

ಇತರ ವಿಷಯಗಳನ್ನು ಹೊರತುಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿರುವ ಮಧ್ಯೆಯು ನಿರುದ್ಯೋಗಿಗಳ ಸಮಸ್ಯೆಯಲ್ಲಿ ಯಾಕೆ ಹೆಚ್ಚಳವಾಗುತ್ತಿದೆ ಎನ್ನುವ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.

ಮಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಾಜೀ ಸಂಸ್ಥೆಯ 70 ವರ್ಷ ವಯಸ್ಸಿನ ಡೈಮಂಡ್, ಸಾಮಾಜಿಕ ಭದ್ರತೆ, ಪಿಂಚಣಿ ಮತ್ತು ತೆರಿಗೆ ಕುರಿತಂತೆ ನಡೆಸಿದ ಸಂಶೋಧನೆಗೆ ನೊಬೆಲ್ ಬಹುಮಾನ ಪಡೆದಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಡೈಮಂಡ್ ಅವರನ್ನು ಫೆಡರಲ್ ರಿಸರ್ವ್ ಬ್ಯಾಂಕ್‌ನ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

ಇಲಿನೊಯಿಸ್‌ನ ಎವಾನ್‌ಸ್ಟೊನ್ ನಾರ್ಥ್‌ವೆಸ್ಟರ್ನ್ ಯುನಿವರ್ಸಿಟಿಯ ಆರ್ಥಿಕ ವಿಭಾಗದ ಪ್ರಾಧ್ಯಾಪಕ 71 ವರ್ಷ ವಯಸ್ಸಿನ ಮೊರ್ಟೆನ್‌ಸನ್ ಹಾಗೂ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಪ್ರಾಧ್ಯಾಪಕ 62 ವರ್ಷ ವಯಸ್ಸಿನ ಪಿಸ್ಸಾರೈಡ್ಸ್ ಆರ್ಥಿಕ ನೊಬೆಲ್ ಪ್ರಶಸ್ತಿ ದೊರೆತಿದೆ.
ಸಂಬಂಧಿತ ಮಾಹಿತಿ ಹುಡುಕಿ