ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲ ನೀಡುತ್ತಿದೆ ಎನ್ನುವದು ತಪ್ಪು ತಿಳುವಳಿಕೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2004ರಿಂದ ಇಲ್ಲಿಯವರೆಗೆ ತಾಲಿಬಾನ್ ಉಗ್ರರಿಗೆ ಐಎಸ್‌ಐ ಬೆಂಬಲ ನೀಡುತ್ತಿದೆ ಎನ್ನುವ ವರದಿಗಳು ಸತ್ಯಾಂಶಕ್ಕೆ ದೂರವಾಗಿವೆ. ಇಂತಹ ಆರೋಪಗಳನ್ನು ತಾವು ಬಲವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಅಲ್‌ಕೈದಾ ಉಗ್ರರ ವಿರುದ್ಧ ಪಾಕಿಸ್ತಾನ ಕಾರ್ಯಾಚರಣೆ ನಡೆಸುತ್ತಿಲ್ಲ ಎನ್ನುವ ಆರೋಪಗಳಿಗೆ ಉತ್ತರಿಸಿದ ಮುಷ್ರಫ್,ಆದರೆ, ತಾವು ಇಂತಹ ಆರೋಪಗಳು ಸತ್ಯಾಂಶಕ್ಕೆ ದೂರವಾಗಿವೆ. ಉಗ್ರರನ್ನು ಸದೆಬಡೆಯಲು ಪಾಕ್ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಉಗ್ರರ ಭದ್ರಕೋಟೆಗಳ ಮೇಲೆ ದಾಳಿ ನಡೆಸುವುದೇ ನನ್ನ ಪ್ರಮುಖ ಗುರಿ. ನಾನು ಅಧಿಕಾರದಲ್ಲಿದ್ದಾಗ ಪಸ್ತೂನ್ ಪ್ರದೇಶದಲ್ಲಿದ್ದ ತಾಲಿಬಾನಿಗಳನ್ನು ಅಫ್ಘಾನಿಸ್ತಾನದ ಗಡಿಯವರೆಗೆ ಹಿಂದಕ್ಕೆ ತಳ್ಳಿದ್ದೆ ಎಂದು ಜನರಲ್ ಪರ್ವೇಜ್ ಮುಷ್ರಫ್ ತಿಳಿಸಿದ್ದಾರೆ.