ಇಸ್ಲಾಮಾಬಾದ್, ಮಂಗಳವಾರ, 12 ಅಕ್ಟೋಬರ್ 2010( 12:51 IST )
ಪಾಕಿಸ್ತಾನದ ಅಪ್ಘನ್ ಗಡಿಭಾಗದಲ್ಲಿರುವ ಮೊಹಮಂದ್ ಬುಡಕಟ್ಟು ಪ್ರದೇಶದಲ್ಲಿರುವ ವಿದ್ಯಾರ್ಥಿನಿಯರ ಶಾಲೆಯ ಮೇಲೆ ಅಪರಿಚಿತ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬುಡಕಟ್ಟು ಪ್ರದೇಶದಲ್ಲಿರುವ ಶಾಲೆಗಳ ಮೇಲೆ ಉಗ್ರರು ನಿರಂತರ ದಾಳಿ ನಡೆಸುತ್ತಿದ್ದು, ಇದೀಗ 57ನೇ ಬಾರಿ ವಿದ್ಯಾರ್ಥಿನಿಯರ ಶಾಲೆಯ ಮೇಲೆ ನಡೆಸಿದಂತಾಗಿದೆ.
ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಮಲಾಕಂಡ್ ಪ್ರಾಂತ್ಯದಲ್ಲಿ 200 ಶಾಲೆಗಳನ್ನು ಉಗ್ರರು ನಾಶಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ಆಧುನಿಕ ಶಿಕ್ಷಣ ಪಡೆಯುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದ್ದು, ಶರಿಯಾ ಕಾನೂನು ಮಾತ್ರ ಅನುಸರಿಸತಕ್ಕದು ಎಂದು ಉಗ್ರರು ಫರ್ಮಾನ್ ಹೊರಡಿಸಿದ್ದಾರೆ.