19 ವರ್ಷಗಳ ಸುರ್ಧೀರ್ಘ ಅವಧಿಯ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆಯುವುದರಲ್ಲಿ ಭಾರತ ಯಶಸ್ವಿಯಾಗಿದೆ.
ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಟ್ಟು 191 ಸದಸ್ಯ ರಾಷ್ಟ್ರಗಳ ಪೈಕಿ 187 ರಾಷ್ಟ್ರಗಳು ಭಾರತದ ಸದಸ್ಯತ್ವ ರಾಷ್ಟ್ರವು ಬೆಂಬಲಿಸಿ ಮತ ಚಲಾಯಿಸಿದರೆ ಒಂದು ರಾಷ್ಟ್ರವು ಮತದಾನದಿಂದ ದೂರವುಳಿದಿತ್ತು.
ಭದ್ರತಾ ಪಡೆಯಲ್ಲಿ ಸದಸ್ಯತ್ವ ಪಡೆಯಲು ಭಾರತಕ್ಕೆ ಕನಿಷ್ಠ 2/3 ಅಂದರೆ 128 ಮತಗಳು ಬೇಕಾಗಿದ್ದವು. ಈ ಹಿಂದೆ ಆರು ಬಾರಿ ಸ್ಥಾನ ಸ್ಥಾನ ಪಡೆದಿದ್ದ ಭಾರತ ಈ ಬಾರಿ ಏಷ್ಯಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತ ಭದ್ರತಾ ಮಂಡಳಿನಲ್ಲಿ ಕಾರ್ಯನಿರ್ವಹಿಸಲಿದೆ. ಈ ಬಾರಿಯೂ ಭದ್ರತಾ ಮಂಡಳಿನ ಸುಧಾರಣೆಗೆ ಆದ್ಯತೆ ನೀಡುವುದಾಗಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ನುಡಿದರು.
ಹಲವು ರಾಜ್ಯಗಳ ಬೆಂಬಲ ಪಡೆಯುವಲ್ಲಿ ನಾವು ಸಾಕಷ್ಟು ಪರಿಶ್ರಮ ಪಟ್ಟಿದ್ದು, ತಾತ್ಕಾಲಿಕ ಸದಸ್ಯತ್ವ ಸಂತಸ ತಂದಿದೆ ಎಂದವರು ಹೇಳಿದರು.
ಭಾರತ ಇದೀಗ 2011 ಜನವರಿ 1ರಿಂದ ಭದ್ರತಾ ಮಂಡಳಿನ ತಾತ್ಕಾಲಿಕ ಸದಸ್ಯತ್ವವನ್ನು ಜಪಾನ್‌ನಿಂದ ಪಡೆದುಕೊಳ್ಳಲಿದೆ.