ಚೀನಾ ಸೇಡು ಆರಂಭ
ಒಸ್ಲೊ: ಸರಕಾರದ ವಿರುದ್ಧ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆ ನಡೆಸಿ ಜೈಲಿನಲ್ಲಿರುವ ಹೋರಾಟಗಾರನಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಚೀನಾ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿದೆ. ಅದರ ಮೊದಲ ಅಂಗವಾಗಿ ದೇಶದಲ್ಲಿ ನಡೆಯಬೇಕಿದ್ದ ನಾರ್ವೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.