ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಸ್ಕೂಲ್ ವಿದ್ಯಾರ್ಥಿಗಳ ಜತೆ ಸೆಕ್ಸ್; ಒಪ್ಪಿಕೊಂಡ ಶಿಕ್ಷಕಿ (Indian teacher | sex with pupil | Hina Patel | Birkdale High School)
Bookmark and Share Feedback Print
 
15ರ ಹರೆಯದ ಇಬ್ಬರು ವಿದ್ಯಾರ್ಥಿಗಳ ಜತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಭಾರತೀಯ ಮೂಲದ ಬ್ರಿಟನ್ ಶಿಕ್ಷಕಿ, ತಾನು ಕೃತ್ಯ ನಡೆಸಿರುವುದು ಹೌದು ಎಂದು ಒಪ್ಪಿಕೊಂಡಿದ್ದಾಳೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಸೌತ್‌ಪೋರ್ಟ್ ಸಮೀಪದ ಬಿರ್ಕಾಡಾಲೆ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದ 37ರ ಹರೆಯದ ಹೀನಾ ಪಟೇಲ್ ತನ್ನ ಮನೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಜತೆ ಪೂರ್ಣ ಪ್ರಮಾಣದ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು 'ಡೈಲಿ ಮೇಲ್' ಪತ್ರಿಕೆ ಹೇಳಿದೆ.

ಇದೇ ವರ್ಷದ ಫೆಬ್ರವರಿ 1ರಿಂದ ಮಾರ್ಚ್ 18ರ ನಡುವೆ ಹೈಟೌನ್ ಸಮೀಪದ ತನ್ನ ಮನೆಯಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ಇಬ್ಬರು ಹೈಸ್ಕೂಲು ಹುಡುಗರನ್ನು ಶಿಕ್ಷಕಿ ಭೇಟಿಯಾಗಿದ್ದಳು.

ಈ ಬಗ್ಗೆ ವಿಚಾರಣೆ ನಡೆಸಿರುವ ಕೆಳ ಹಂತದ ನ್ಯಾಯಾಲಯವು, ಇಬ್ಬರು ಹುಡುಗರು ಅಪ್ರಾಪ್ತರಾಗಿರುವುದರಿಂದ ಅವರ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಆದರೆ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಎರಡು ದೋಷಾರೋಪಗಳನ್ನು ಆಕೆಯ ಮೇಲೆ ಹೊರಿಸಿದೆ.

ಹೀನಾ ಪಟೇಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.

ಆಕೆ ತನ್ನ ಸ್ಥಾನವನ್ನು ಇಂತಹ ರೀತಿಯಲ್ಲಿ ಬಳಸಿಕೊಂಡಿರುವುದು ನನಗೆ ಆಘಾತ ತಂದಿದೆ. ಇಂತಹ ಒಂದು ಪ್ರಕರಣವನ್ನು ನಾವು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾಗಿರುವುದಕ್ಕೆ ನಿರಾಳವಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಗ್ಯಾರಿ ಲವರೀಜ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಅದೇ ಹೊತ್ತಿಗೆ ಹೀನಾ ಅವರ ವಕೀಲ ಪ್ಯಾಟ್ರಿಕ್ ವಿಲಿಯಮ್ಸನ್, ತನ್ನ ಕಕ್ಷಿಗಾರ ತಪ್ಪೆಸಗಿರುವುದರಿಂದ ನ್ಯಾಯಾಲಯವು ಶಿಕ್ಷೆ ವಿಧಿಸಲು ಅಧಿಕಾರ ಹೊಂದಿದೆ ಎಂದು ಹೇಳಿದ್ದಾರೆ.

ಈ ನಡುವೆ ಆರೋಪಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. 11ರಿಂದ 16ರ ನಡುವಿನ 930ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಬಾಲಕರ ಶಾಲೆಯ ಯಾವುದೇ ಹುಡುಗರನ್ನು ಅಥವಾ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕಿ ಸಂಪರ್ಕ ಮಾಡಬಾರದು ಎಂದು ನ್ಯಾಯಾಲಯ ತನ್ನ ಸೂಚನೆಯಲ್ಲಿ ತಿಳಿಸಿದೆ.

ನವೆಂಬರ್ 22ರಂದು ಲಿವರ್ ಪೂಲ್ ಕ್ರೌನ್ ನ್ಯಾಯಾಲಯವು ಆಕೆಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ