ಫಿಲಿಫೈನ್ಸ್ ಮಾರ್ಗವಾಗಿ ಕತಾರ್ಗೆ ಹೊರಟಿದ್ದ ಕತಾರ್ ಏರ್ವೇಸ್ ವಿಮಾನದ ಕ್ಯಾಪ್ಟನ್ ಹೃದಯಾಘಾತದಿಂದ ವಿಮಾನದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
43ರ ಹರೆಯದ ಭಾರತೀಯ ಪ್ರಜೆ ಕ್ಯಾಪ್ಟನ್ಗೆ ವಿಮಾನ ಹಾರಿಸುತ್ತಿದ್ದ ಸಂದರ್ಭದಲ್ಲಿಯೇ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಆಗ ಸಹ ಪೈಲಟ್ ವಿಮಾನವನ್ನು ಮಲೇಷ್ಯಾದ ರಾಜಧಾನಿ ಕೌಲಾಲಂಪುರದತ್ತ ತಿರುಗಿಸಿ ತುರ್ತು ನಿಲುಗಡೆ ಮಾಡಲು ವಿನಂತಿಸಿಕೊಂಡಿರುವುದಾಗಿ ಏರ್ವೇಸ್ ಮೂಲಗಳು ತಿಳಿಸಿವೆ.
ಆದರೆ ಕತಾರ್ ಏರ್ವೇಸ್ ಪೈಲಟ್ ಮನಿಲಾದಿಂದ ದೋಹಾ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿಯೇ ಸಾವನ್ನಪ್ಪಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುವುದಾಗಿ ಕತಾರ್ ಏರ್ವೇಸ್ ಅಧಿಕಾರಿಗಳು ಇ-ಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಂತರ ಸಹ ಪೈಲಟ್ ವಿಮಾನವನ್ನು ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ತಿಳಿಸಿರುವ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.