ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಲ್ಲಿ ಪಂಚವಾರ್ಷಿಕ ಯೋಜನೆ ಸಭೆ ಆರಂಭ (China | ,Five year plan | Meeting)
Bookmark and Share Feedback Print
 
ಚೀನಾ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಚಾಲನೆಯನ್ನು ಮುಂದುವರಿಸಿದ್ದು, ಮುಂಬರುವ ಪಂಚವಾರ್ಷಿಕ ಯೋಜನೆ ಕುರಿತಂತೆ, ಈಗಾಗಲೇ ಸಭೆಯನ್ನು ಆರಂಭಿಸಿದೆ ಎಂದು ಅಡಳಿತರೂಢ ಕಮ್ಯೂನಿಷ್ಟ್ ಪಕ್ಷದ ಮೂಲಗಳು ತಿಳಿಸಿವೆ.

2011-2015ರ ಪಂಚಾರ್ಷಿಕ ಯೋಜನೆಯ ರೂಪರೇಷೆಗಳನ್ನು ಕೇಂದ್ರ ಸಮಿತಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಮಿತಿ, ಯೋಜನೆಯನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಆರ್ಥಿಕತೆಯನ್ನು ದ್ವಿಗುಣ ಪ್ರಮಾಣದಲ್ಲಿ ಹೆಚ್ಚಿಸಲು ಸೂಕ್ತ ಯೋಜನೆಗಳನ್ನು ಘೋಷಿಸಲಾಗಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬೃಹತ್ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ದೇಶದ ರಫ್ತು ವಹಿವಾಟು ಗುರಿಯನ್ನು ಕೂಡಾ ಹೆಚ್ಚಿಸಲು ದೇಶಿಯ ಕೈಗಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಗಮನಹರಿಸಲಾಗುತ್ತಿದೆ ಎಂದು ಸರಕಾರದ ಉನ್ನತ ಅದಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಪಂಚವಾರ್ಷಿಕ ಯೋಜನೆ, ಸಭೆ