ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂದೇ ದಿನ ಇಬ್ಬರನ್ನು ಮದುವೆಯಾದ ಪಾಕಿಸ್ತಾನಿ (multan|humaira qasim|azhar haidri)
Bookmark and Share Feedback Print
 
23ರ ಹರೆಯದ ಪಾಕಿಸ್ತಾನಿ ಯುವಕನೊಬ್ಬ ಕೇವಲ 24 ಗಂಟೆಯಲ್ಲಿ ಇಬ್ಬರನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಾನು ಪ್ರೀತಿಸಿದ ಹುಡುಗಿ ಹಾಗೂ ತನ್ನ ಅಪ್ಪ ಅಮ್ಮ ತನಗಾಗಿ ಹುಡುಗಿದ ಹುಡುಗಿ ಇಬ್ಬರನ್ನೂ ಮದುವೆಯಾಗುವ ಮೂಲಕ ಪೋಷಕರ ಪ್ರೀತಿಗೂ, ತನ್ನ ಪ್ರೀತಿಗೂ ನ್ಯಾಯ ಸಲ್ಲಿಸಿದ್ದಾನೆ!

ಪಾಕಿಸ್ತಾನದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ನ್ಯಾಯ ಸಮ್ಮತವೇ. ಪಾಕಿಸ್ತಾನದಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿರುವುದರಿಂದ ಹಾಗೂ ಇಸ್ಲಾಂಧರ್ಮದಲ್ಲಿ ಬಹುಪತ್ನಿತ್ವಕ್ಕೆ ಸಮ್ಮತವಿರುವುದರಿಂದ ನ್ಯಾಯ ಸಮ್ಮತ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಬಹುತೇಕ ಎಲ್ಲ ಪ್ರಕರಣಗಳಲ್ಲೂ ಮದುವೆಯಾದವರು ಒಂದೆರಡು ವರ್ಷದ ನಂತರವಷ್ಟೇ ತನ್ನ ಮೊದಲ ಪತ್ನಿಯಿಂದ ಅನುಮತಿ ಪಡೆದು ನಂತರ ಮತ್ತೊಂದು ವಿವಾಹವಾಗುತ್ತಾರೆ. ಆದರೆ, ಇಲ್ಲಿನ ಪ್ರಕರಣ ವಿಚಿತ್ರವಾಗಿದೆ.

23ರ ಹರೆಯದ ಅಜರ್ ಹೈದ್ರಿ ಅವರು ತನ್ನ ಬಾಲ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಮೈರಾ ಕಾಸಿಮ್ (28) ಅವರೊಂದಿಗೆ ವಿವಾಹವಾಗಲು ಒಪ್ಪಿರಲಿಲ್ಲ. ಪೋಷಕರೇ ಬಾಲ್ಯದಲ್ಲಿ ಈ ನಿಶ್ಚಿತಾರ್ಥ ನಡೆಸಿದ್ದರಿಂದ ಪೋಷಕರೂ ತಮ್ಮ ಪಟ್ಟು ಬಿಟ್ಟಿರಲಿಲ್ಲ. ಆದರೆ ಅಜರ್ ಮನಸ್ಸು ಮಾತ್ರ ತಾನು ಪ್ರೀತಿಸಿದ್ದ 21ರ ಹರೆಯದ ರುಮಾನಾ ಅಸ್ಲಾಂರನ್ನು ಮದುವೆಯಾಗುವ ಕಡೆಯಿತ್ತು. ಇದನ್ನು ಪೋಷಕರು ಸಮ್ಮತಿಸಿರಲಿಲ್ಲ. ಒಟ್ಟಾರೆ ಕನ್‌ಫ್ಯೂಷನ್‌ನಲ್ಲಿ ಬಿದ್ದ ಅಜರ್ ಇಬ್ಬರ ಒಪ್ಪಿಗೆಯನ್ನೂ ಪಡೆದು ಇಬ್ಬರನ್ನೂ ಮದುವೆಯಾಗಿಯೇ ಬಿಟ್ಟರು. ಪೋಷಕರು ಸೂಚಿಸಿದ ಹುಡುಗಿಯನ್ನು ವಿವಾಹವಾಗಿ, ನಂತರ ಮತ್ತೊಂದು ನಗರಕ್ಕೆ ತೆರಳಿ 24 ಗಂಟೆಯೊಳಹಗಾಗಿ ತಾನು ಪ್ರೀತಿಸಿದ ವಿವಾಹವನ್ನೂ ಮದುವೆಯಾಗಿ ಅಚ್ಚರಿ ಮೂಡಿಸಿದರು. ಹಾಗಾಗಿ ಇದು ಪಾಕಿಸ್ತಾನದ ಟಿವಿಗಳಲ್ಲೂ ಬಿತ್ತರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿತು.

ಮದುವೆಯಾದ ನಂತರ ಮಾತನಾಡಿದ ಅಜರ್ ಪ್ರೀತಿಸಿದ ಹುಡುಗಿ, ನಾವಿಬ್ಬರೂ ಹುಡುಗಿಯರು ಒಬ್ಬನೇ ವ್ಯಕ್ತಿಯನ್ನು ಪ್ರೀತಿಸಿದ ಬಗ್ಗೆ ನನಗೆ ಖುಷಿಯಿದೆ. ಈ ಮದುವೆಯಿಂದ ನನಗೆ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಜರ್ ಕೂಡಾ, ಇಬ್ಬರು ಹುಡುಗಿಯರ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವುದು ತುಂಬ ಕಡಿಮೆ. ಇಲ್ಲಿ ಇಬ್ಬರೂ ಒಪ್ಪಿದ್ದು ನನಗೆ ಸಂತೋಷ ತಂದಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ