ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನ ಐಎಸ್ಐ ರಕ್ಷಣೆಯಲ್ಲಿ ಒಸಾಮಾ, ಜವಾಹರಿ: ನ್ಯಾಟೋ (Osama bin Laden | ISI | al-Zawahiri | Pakistan | al-Qaeda)
Bookmark and Share Feedback Print
 
ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕರಾಗಿರುವ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಹಾಗೂ ಎರಡನೇ ನಾಯಕ ಐಮನ್ ಅಲ್ ಜವಾಹರಿ ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದು, ಇಬ್ಬರನ್ನೂ ಐಎಸ್ಐನ ಕೆಲವು ಸದಸ್ಯರು ರಕ್ಷಣೆ ನೀಡುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಇಬ್ಬರೂ ಪ್ರಮುಖ ಕಮಾಂಡರ್‌ಗಳಾದ ಲಾಡೆನ್ ಮತ್ತು ಜವಾಹರಿ ಒಟ್ಟಿಗೆ ವಾಸ್ತವ್ಯ ಹೂಡಿಲ್ಲ. ಅಲ್ಲದೇ ಅವರು ಗುಹೆಯಲ್ಲಿಯೂ ಬಂಧಿಯಾಗಿ ಕಾಲ ಕಳೆಯುತ್ತಿಲ್ಲ ಎಂದು ಅಫ್ಘಾನಿಸ್ತಾನದಲ್ಲಿನ ನ್ಯಾಟೋ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸಿಎನ್ಎನ್ ವರದಿ ಬಹಿರಂಗಪಡಿಸಿದೆ.

ಅಲ್ ಖಾಯಿದಾ ಸಂಘಟನೆಯ ಯಾರೊಬ್ಬರೂ ಗುಹೆಯಲ್ಲಿ ವಾಸವಾಗಿಲ್ಲ ಎಂದಿರುವ ಅಧಿಕಾರಿ, ಇದೊಂದು ಗುಪ್ತಚರ ಇಲಾಖೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ತಮ್ಮ ಹೆಸರನ್ನು ಹೇಳಲು ನಿರಾಕರಿಸಿರುವುದಾಗಿ ಸಿಎನ್ಎನ್ ತಿಳಿಸಿದೆ.

ಒಸಾಮಾ ಮತ್ತು ಜವಾಹರಿ ಪಾಕಿಸ್ತಾನದ ಐಎಸ್ಐನ ಕೆಲವು ಸದಸ್ಯರು ಮತ್ತು ಸ್ಥಳೀಯ ಜನರ ನೆರವಿನೊಂದಿಗೆ ಸುರಕ್ಷಿತವಾಗಿ ಜೀವಿಸುತ್ತಿರುವುದಾಗಿ ಅಧಿಕಾರಿ ವಿವರಿಸಿದ್ದಾರೆ. ಆದರೆ ಪಾಕಿಸ್ತಾನ ಮಾತ್ರ ತಾನು ಅಲ್ ಖಾಯಿದಾ ವರಿಷ್ಠ ಒಸಾಮಾನಿಗೆ ಯಾವುದೇ ಆಶ್ರಯ ನೀಡಿಲ್ಲ ಎಂದೇ ತಿಪ್ಪೆ ಸಾರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ