ಆಮ್ಸ್ಟೆರ್ಡಾಮ್, ಸೋಮವಾರ, 18 ಅಕ್ಟೋಬರ್ 2010( 18:33 IST )
ಮುಸ್ಲಿಂ ವಿರೋಧಿಯಾಗಿರುವ ಅಲ್ಪಸಂಖ್ಯಾತರು ಸರ್ಕಾರ ರಚಿಸಲಾಗಿದೆ ಎಂದು ಆರೋಪಿಸಿ ಇದೀಗ ತಾಲಿಬಾನಿಗಳು ನೆದರ್‌ಲ್ಯಾಂಡ್ ವಿರುದ್ಧ ಭಯೋತ್ಪಾದನಾ ದಾಳಿಯ ಬೆದರಿಕೆ ಹಾಕಿದ್ದಾರೆ.
ನೆದರ್ ಲ್ಯಾಂಡ್ ಸರ್ಕಾರ ಮುಸ್ಲಿ ವಿರೋಧಿ ನಿಯಮಗಳನ್ನು ಹೇರಿದರೆ ಖಂಡಿತವಾಗಿಯೂ ಅದು ಮುಂದೆ ಕಠಿಣ ಭಯೋತ್ಪಾದನೆಯನ್ನು ಎದುರಿಸಬೇಕಾಗುತ್ತದೆ ಎಂದು ತಾಲೀಬಾನಿನ ವಕ್ತಾರ ಸಬೀವುಲ್ಲ ಮುಜಾಹಿದ್ ತಮ್ಮ ಪತ್ರಿಕೆಯ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕಳೆದ ವಾರವಷ್ಟೆ ಅಲ್ಪಸಂಖ್ಯಾತರ ಲಿಬರಲ್ಸ್ ಹಾಗೂ ಕ್ರಿಶ್ಚಿಯನ್ ಡೆಮೋಕ್ರಾಟ್ಸ್ ಪಕ್ಷಗಳು ಜಂಟಿಯಾಗಿ ಸರ್ಕಾರ ರಚಿಸಿದ್ದವು. ಇದರ ವಿರುದ್ಧವಾಗಿ ತಾಲೀಬಾನಿಗಳು ಧ್ವನಿ ಎತ್ತಿದ್ದಾರೆ.