ಭಾರೀ ಪ್ರವಾಹದಿಂದಾಗಿ ವಿಯೆಟ್ನಾಂನಲ್ಲಿ 30 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ನೂರಾರು ಮಂದಿಯ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಪ್ರಾಣರಕ್ಷಣೆಗಾಗಿ ಸೂಕ್ತ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ದಿಢೀರ್ ಏರ್ಪಟ್ಟ ಪ್ರವಾಹದಿಂದಾಗಿ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸಿಗೆ ನೀರು ನುಗ್ಗಿ ಪ್ರವಾಹ ಏರ್ಪಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಸೇರಿದಂತೆ ಹಲವರು ಈಜಿ ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ಪಡೆದಿದ್ದಾರೆ.
46ರ ಹರೆಯದ ಮಹಿಳೆಯೊಬ್ಬರು ತಮ್ಮ ಮಗಳನ್ನು ಎತ್ತಿಕೊಂಡು ನೀರಿನಿಂದ ಮೇಲೇಳಲು ಹರಸಾಹಸ ಪಡುತ್ತಿದ್ದರು. ಮೂರು ಗಂಟೆಗಳ ಕಾಲ ಈಕೆ ತನ್ನ ಮಗಳನ್ನು ಅವುಚಿ ಹಿಡಿದು ಕಾಪಾಡಿದರೂ, ನಂತರ ದಿಢೀರ್ ನುಗ್ಗಿದ ಪ್ರವಾಹಕ್ಕೆ ಆಕೆಯೂ ಸೇರಿದಂತೆ ಮಗು ಕೊಚ್ಚಿಕೊಂಡು ಹೋಗಿವೆ. ಆದರೆ ಆಕೆಯನ್ನು ರಕ್ಷಿಸಲಾಗಿದ್ದು, ಮಗು ಮಾತ್ರ ಕಾಣೆಯಾಗಿದೆ.
ಹಲವರು ಬಸ್ನ ಗಾಜನ್ನು ಒಡೆದು ಹೊರಬಂದರೆ, ಅನೇಕರು ಬಸ್ನೊಳಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಯೆಟ್ನಾಂ ಪತ್ರಿಕೆಗಳು ವರದಿ ಮಾಡಿವೆ.