ಯುನೈಟೆಡ್ ಅರಬ್ ಎಮಿರೈಟ್ಸ್‌ನ ಅತ್ಯುನ್ನತ ಕೋರ್ಟು ಇದೀಗ ವಿಚಿತ್ರವಾದ ಆಘಾತಕಾರಿ ತೀರ್ಪೊಂದನ್ನು ನೀಡಿದೆ. ಪುರುಷ ತನ್ನ ಹೆಂಡತಿ ಹಾಗೂ ಮಕ್ಕಳಿಗೆ ಯಾವುದೇ ಗಾಯಗಳಾಗದಂತೆ ಎಷ್ಟು ಬೇಕಾದರೂ ಹೊಡೆಯಬಹುದು ಎಂಬುದೇ ಈ ತೀರ್ಪು!
ಈ ದೇಶದಲ್ಲಿ ಸ್ಥಳೀಯರಿಗಿಂತಲೂ ಅತೀ ಹೆಚ್ಚು ವಾಸಿಸುತ್ತಿರುವುದು ವಿದೇಶೀಯರೇ ಆಗಿದ್ದು, ಈ ತೀರ್ಪಿನ ಮೂಲಕ ಇಲ್ಲಿನ ಫೆಡರಲ್ ಸುಪ್ರೀಂ ಕೋರ್ಟ್ ಇಸ್ಲಾಂನ ನಿಯಮಗಳಿಂದ ಹೆಚ್ಚು ಪ್ರಭಾವ ಪಡೆದುದನ್ನು ಮೂಲಕ ಗಮನಿಸಬಹುದು.
ತನ್ನ ಹೆಂಡತಿಯನ್ನು ಹೊಡೆದು ಅಪರಾಧಿ ಪ್ರಜ್ಞೆ ಬೆಳೆಸಿಕೊಂಡ ಕುರಿತು ಇತ್ಯರ್ಥಪಡಿಸುವ ಸಂದರ್ಭ ಕೋರ್ಟು ಈ ಮಾತನ್ನು ಹೇಳಿದೆ. ಯಾವುದೇ ಗಾಯಗಳಾಗದಂತೆ ತನ್ನ ಹೆಂಡತಿಗೆ ಹಾಗೂ ಮಕ್ಕಳಿಗೆ ಪುರುಷ ಹೊಡೆಯಬಹುದು. ಅದು ಇಸ್ಲಾಂ ಧರ್ಮದ ಶಿಸ್ತಿನಡಿಯೇ ಬುತ್ತದೆ. ಅದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಕೋರ್ಟು ತೀರ್ಪು ನೀಡಿದೆ!