ಶ್ರೀಲಂಕಾ:4,685 ಎಲ್‌ಟಿಟಿಇ ಮಾಜಿ ಬಂಡುಕೋರರಿಗೆ ಪುನರ್ವಸತಿ
ಕೊಲಂಬೊ, ಸೋಮವಾರ, 18 ಅಕ್ಟೋಬರ್ 2010( 19:57 IST )
ಕಳೆದ ವರ್ಷ ಶ್ರೀಲಂಕಾ ಮಿಲಿಟರಿ ಪಡೆಯ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಇ ಸಂಪೂರ್ಣವಾಗಿ ಸೋತು ಸುಣ್ಣವಾದ ನಂತರ ಇದೀಗ ಸುಮಾರು 4685 ಎಲ್‌ಟಿಟಿಇ ಮಾಜಿ ಸದಸ್ಯರಿಗೆ ಲಂಕಾ ಸರಕಾರ ಪುನರ್ವಸತಿ ಕಲ್ಪಿಸಿಕೊಡುವ ಮೂಲಕ ಮುಖ್ಯವಾಹಿನಿಗೆ ಬಂದಿರುವುದಾಗಿ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.
ಪುನರ್ವಸತಿ ನಂತರ ಸುಮಾರು 4,685 ಮಾಜಿ ಎಲ್‌ಟಿಟಿಇಗಳನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಯಿತು. ಇನ್ನೂ ಆರು ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುವುದು ಎಂದು ಪುನರ್ವಸತಿ ಕಮಿಷನರ್ ಬ್ರಿಗೇಡಿಯರ್ ಸುದಾಂತಾ ರಾಜಸಿಂಘೆ ವಿವರಿಸಿದ್ದಾರೆ.
ಅಲ್ಲದೇ, ಉತ್ತರದ ವಾಯುನಿಯಾ ನಗರದಿಂದ ಸುಮಾರು 498ಕ್ಕೂ ಅಧಿಕ ಜನರನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಹೆಚ್ಚಿನವರು ಮಹಿಳೆಯರೇ ಸೇರಿದ್ದಾರೆ. ಅಷ್ಟೇ ಅಲ್ಲ ಮಾಜಿ ಬಂಡುಕೋರರನ್ನು ಖಾಸಗಿ ರಫ್ತು ಕಂಪನಿಯೊಂದು ಕೆಲಸ ನೀಡುವ ಇಚ್ಛೆ ಹೊಂದಿರುವುದಾಗಿಯೂ ಅಧಿಕೃತ ವೆಬ್‌ಸೈಟ್ ವರದಿ ತಿಳಿಸಿದೆ.