ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಛೇ...ಲಾಡೆನ್, ಜವಾಹಿರಿಗೆ ಆಶ್ರಯ ಕೊಟ್ಟೇ ಇಲ್ಲಾ: ಪಾಕ್ (Rehman Malik | bin Laden | Zawahiri | Pakistan | al Qaeda)
Bookmark and Share Feedback Print
 
ವಿಶ್ವದ ಮೋಸ್ಟ್ ವಾಂಟೆಡ್ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಮತ್ತು ಎರಡನೇ ಮುಖಂಡ ಐಮನ್ ಅಲ್ ಜವಾಹಿರಿ ಪಾಕಿಸ್ತಾನದ ಐಎಸ್ಐ ಕೆಲವು ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಆಶ್ರಯ ಪಡೆದಿದ್ದಾರೆಂಬ ವರದಿಯನ್ನು ಪಾಕಿಸ್ತಾನ ತಳ್ಳಿಹಾಕಿದೆ.

ಅಲ್ ಖಾಯಿದಾ ವರಿಷ್ಠನಿಗೆ ಪಾಕಿಸ್ತಾನದಲ್ಲಿ ಠಿಕಾಣಿ ಹೂಡುವ ಯಾವ ದಾರಿಯೂ ಇಲ್ಲ, ಅಲ್ಲದೇ ಭಯೋತ್ಪಾದಕರ ಕುರಿತಂತೆ ಎಲ್ಲಾ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದಾಗಿಯೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿರುವುದಾಗಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ.

ಆದರೆ ಒಸಾಮಾ ಬಿನ್ ಲಾಡೆನ್ ಆಗಲಿ, ಆತನ ಸಹಾಯಕ ಐಮನ್ ಹಾಗೂ ಮುಲ್ಲಾ ಓಮರ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆಂಬುದು ಶುದ್ದ ಸುಳ್ಳು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.

ಲಾಡೆನ್ ಮತ್ತು ಐಮನ್ ಜವಾಹಿರಿ ವಾಯುವ್ಯ ಪಾಕಿಸ್ತಾನ ಭಾಗದಲ್ಲಿ ಐಎಸ್ಐನ ಕೆಲವು ಸದಸ್ಯರ ನೆರವಿನಲ್ಲಿ ಆಶ್ರಯ ಪಡೆಯುತ್ತಿರುವುದಾಗಿ ಸಿಎನ್ಎನ್ ಸೋಮವಾರ ವರದಿಯೊಂದನ್ನು ಪ್ರಕಟಿಸಿತ್ತು. ಈ ಬಗ್ಗೆ ಮಲಿಕ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಇದೊಂದು ಕಪೋಲಕಲ್ಪಿತ ವರದಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ