ಇರಾಕ್ನ ಪೊಲೀಸ್ ಅಧಿಕಾರಿಯ ಮನೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕುಟುಂಬದ ಮೂರು ಮಂದಿ ಸಾವನ್ನಪ್ಪಿದ್ದು, ಮತ್ತೊಂದು ಪ್ರತ್ಯೇಕ ಬಾಂಬ್ ದಾಳಿಯಲ್ಲಿ 12 ಮಂದಿ ಇರಾನಿ ತೀರ್ಥಯಾತ್ರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಇರಾಕಿನ ಟಿಕ್ರಿತ್ ನಗರದ ಬ್ರಿಗೇಡ್ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಕರ್ನಲ್ ಖ್ವಾಯಿಸ್ ರಶೀದ್ ಎಂಬವರ ಅಪ್ಪ, ಸಹೋದರ ಹಾಗೂ ಸಹೋದರಿ ಈ ಬಾಂಬ್ ದಾಳಿಯಲ್ಲಿ ಅಸುನೀಗಿದ ದುರ್ದೈವಿಗಳು. ಇದರ ಜೊತೆಗೆ ಕುಟುಂಬದ ಇನ್ನಿಬ್ಬರು ಸದಸ್ಯರು ಕೂಡಾ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ವೇಳೆ ಪೊಲೀಸ್ ಅಧಿಕಾರಿ ರಶೀದ್ ಕೂಡಾ ಗಾಯಗೊಂಡಿದ್ದು, ಇಬ್ಬರು ಪೊಲೀಸರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ತೀರ್ಥಯಾತ್ರೆಗೆ ಬಂದಿದ್ದ ಮಂದಿಯ ಮೇಲೆ ದಾಳಿ ನಡೆದಿದೆ. ಯಾತ್ರಾರ್ಥಿಗಳು ತುಂಬಿದ್ದ ಎರಡು ಬಸ್ಗಳ ಮೇಲೆ ದಾಳಿ ನೀಡಿದ್ದು, 12 ಮಂದಿಗೆ ತೀರ್ವ ಗಾಯಗಳಾಗಿವೆ.