ವೆಲ್ಲಿಂಗ್ಟನ್, ಮಂಗಳವಾರ, 19 ಅಕ್ಟೋಬರ್ 2010( 17:35 IST )
ನ್ಯೂಜಿಲ್ಯಾಂಡ್‌ನ ಕ್ರಿಸ್ಟ್ ಚರ್ಚ್ ಸಿಟಿ ಸುತ್ತಮುತ್ತ ಭೂ ಕಂಪನ ನಡೆದಿದೆ. ಈಗ್ಗೆ ಸೆಪ್ಟೆಂಬರ್ ತಿಂಗಳಲ್ಲಷ್ಟೇ ನಡೆದ ಭಾರೀ ಭೂಕಂಪದ ಕಹಿ ನೆನಪು ದೂರವಾಗುವ ಮುನ್ನವೇ ಮತ್ತೊಮ್ಮೆ ಭೂ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪದ ಪ್ರಮಾಣ 5.0 ದಾಖಲಾಗಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿ ನಡೆದ ಭೂಕಂಪ (ರಿಕ್ಟರ್ ಮಾಪನದಲ್ಲಿ 7) ಸಾಕಷ್ಟು ಸಾವಿರಾರು ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಇದೇ ನಗರದಲ್ಲಿ ಭೂಕಂಪನ ನಡೆದಿದ್ದು ಆತಂಕಕ್ಕೆ ಎಡೆ ಮಾಡಿದೆ. ಆದರೆ, ಈ ಬಾರಿ ನಡೆದ ಭೂಕಂಪದ ತೀರ್ವತೆ ಅಷ್ಟು ಪ್ರಮಾಣದ್ದಾಗಿಲ್ಲವಾದ್ದರಿಂದ ಯಾವುದೇ ಹೇಳಿಕೊಳ್ಳುವಂಥ ಪ್ರಾಣ ಹಾನಿ ಸಂಭವಿಸಿಲ್ಲ. 10 ಕಿಮೀ ವ್ಯಾಪ್ತಿಯಲ್ಲಿ ನಡೆದ ಈ ಭೂಕಂಪನದಿಂದಾಗಿ ಹಲವೆಡೆ ಮನೆಗಳು ಉರುಳಿದರೆ, ಇನ್ನು ಕೆಲವೆಡೆ ಗೋಡೆಗಳು ಕುಸಿದಿವೆ ಎಂದು ವರದಿಯಾಗಿದೆ.