ಇಸ್ಲಾಮಾಬಾದ್, ಮಂಗಳವಾರ, 19 ಅಕ್ಟೋಬರ್ 2010( 19:30 IST )
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಕಾರ್ ಬಾಂಬ್ ಸ್ಫೋಟ ಸಂಚಿಗಾಗಿ ಪಾಕಿಸ್ತಾನದ ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಸಂಘಟನೆ ಪಾಕಿಸ್ತಾನಿ ಮೂಲದ ಅಮೆರಿಕ ಪ್ರಜೆ ಉಗ್ರ ಫೈಸಲ್ ಶಾಹಜಾದ್‌ಗೆ ಸುಮಾರು 43,000 ಅಮೆರಿಕನ್ ಡಾಲರ್‌ನಷ್ಟು ಆರ್ಥಿಕ ನೆರವು ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಈ ವಿವರನ್ನು ಶಾಹಜಾದ್ ಸಹಚರರು ಬಾಯ್ಬಿಟ್ಟಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಶಾಹಜಾದ್ ಸಹಚರರನ್ನು ಸೋಮವಾರ ಪೊಲೀಸರು ರಾವಲ್ಪಿಂಡಿ ಮೂಲದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಾಹಜಾದ್ ಸಹಚರರಾದ ಹನ್ಬಾಲ್ ಅಕ್ತರ್, ಮೊಹಮ್ಮದ್ ಶೋಯಬ್ ಮುಘಲ್ ಮತ್ತು ಮೊಹಮ್ಮದ್ ಶಾಹಿದ್ ಹುಸೈನ್‌ನನ್ನು ಬಂಧಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಬಂಧಿತ ಮೂವರು ಶಾಹಜಾದ್ ಜೊತೆ ಸಂಪರ್ಕ ಹೊಂದಿರುವುದಾಗಿ ವಿವರಿಸಿದ್ದಾರೆ.
ಶಾಹಜಾದ್ ತಾಲಿಬಾನ್ ವರಿಷ್ಠ ಹಕೀಮುಲ್ಲಾ ಮೆಹ್ಸೂದ್‌ನನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಅಲ್ಲದೇ ದಾಳಿಗೆ ತಾಲಿಬಾನ್ 43,000 ಯುಎಸ್‌ಡಿ ಡಾಲರ್ ನೆರವು ನೀಡಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.