ಆಫ್ರಿಕಾದಲ್ಲಿ ನೆರೆಗೆ 377 ಬಲಿ, 1.5 ಮಿಲಿಯನ್ ಸಂತ್ರಸ್ಥರು
ಡಕಾರ್, ಬುಧವಾರ, 20 ಅಕ್ಟೋಬರ್ 2010( 13:48 IST )
ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಕಳೆದ ಜೂನ್ ತಿಂಗಳಿಂದ ಮಳೆಯಿಂದಾಗಿರುವ ನೆರೆಯಿಂದ 377 ಮಂದಿ ಸಾವಿಗೀಡಾಗಿದ್ದು 1.5 ಮಿಲಿಯನ್‌ಗೂ ಅಧಿಕ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
2010ರ ವೇಳೆಯಲ್ಲಿ ಅಧಿಕ ಮಂದಿ ನೆರೆ, ಮಳೆಯಿಂದಾಗಿ ಸಂತ್ರಸ್ಥರಾಗಿದ್ದು, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಈ ವರದಿ ತಿಳಿಸಿದೆ.
ವರದಿಯ ಪ್ರಕಾರ, ನಿಗೇರಿಯಾದಲ್ಲಿ 118 ಮಂದಿ ನೆರೆಯಿಂದಾಗಿ ಸಾವಿಗೀಡಾದರೆ, ಘಾನಾದಲ್ಲಿ 52, ಸುಡಾನ್‌ನಲ್ಲಿ 50, ಬೆನಿನ್‌ನಲ್ಲಿ 43, ಚಾಡ್‌ನಲ್ಲಿ 24, ಮೌರಿಟಾನಿಯಾದಲ್ಲಿ 21, ಬರ್ಕಿನಾ ಫಾಸೋದಲ್ಲಿ 16, ಕ್ಯಾಮರೂನ್‌ನಲ್ಲಿ 13, ಗಾಂಬಿಯಾದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ.
ನೆರೆಯಿಂದ ಸಂತ್ರಸ್ಥರಾದ ಪೈಕಿ ಬೆನಿನ್‌ನಲ್ಲಿ 3,60,000 ಮಂದಿ ಬೀದಿಗೆ ಬಿದ್ದಿದ್ದು, ನಿಗೇರಿಯಾದಲ್ಲಿ 3,00,000, ನಿಗೆರ್‌ನಲ್ಲಿ 2,26,611 ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.