ಇಸ್ಲಾಮಾಬಾದ್, ಬುಧವಾರ, 20 ಅಕ್ಟೋಬರ್ 2010( 15:42 IST )
ಪಾಕಿಸ್ತಾನದ ಅತಿ ದೊಡ್ಡ ನಗರ ಕರಾಚಿಯ ಸಿಟಿ ಮಾರುಕಟ್ಟೆಯಲ್ಲಿ ಬಂದೂಕುಧಾರಿಗಳು ದಿಢೀರನೆ ಗುಂಡಿನ ದಾಳಿ ನಡೆಸಿದ ಫಲವಾಗಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕರಾಚಿಯಲ್ಲಿ ಮೊನ್ನೆ ಶನಿವಾರದಿಂದ ಹಲವು ರಾಜಕಾರಣಿಗಳೂ ಸೇರಿದಂತೆ ಕನಿಷ್ಟ 51 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದೀಗ ಆ ಮತ್ತೆ ಆ ಸಂಖ್ಯೆ ಹೆಚ್ಚಿದೆ. ಸಾವನ್ನಪ್ಪಿದ ಹಲವರಿಗೆ ವಿವಿಧ ರಾಜಕೀಯ ಪಕ್ಷಗಳ ಸಂಬಂಧ ಇದೆ ಎನ್ನಲಾಗಿದ್ದು, ರಾಜಕೀಯ ವೈಷಮ್ಯ ಇಲ್ಲಿ ಎದ್ದು ಕಾಣುತ್ತಿದೆ.
ಸಿಟಿ ಮಾರುಕಟ್ಟೆಯಲ್ಲಿ ಮಂಗಳವಾರ ತಡರಾತ್ರಿ ಈ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಮಡಿದವರಲ್ಲಿ ಎಂಟು ಮಂದಿ ಪಾಕಿಸ್ತಾನೀಯರೆಂದು ಗುರುತಿಸಲಾಗಿದೆ.
ಈ ಹಿಂಸಾತ್ಮಕ ದಾಳಿಯಲ್ಲಿ ಇದೀಗ ಎರಡು ಪ್ರಮುಖ ಪಕ್ಷಗಳ ಹೆಸರುಗಳು ಕೇಳಿ ಬರುತ್ತಿದ್ದು, ಮುತ್ತಾಹಿದಾ ಖುಯಾಮಿ ಮೂವೆಂಟ್ ಹಾಗೂ ಅವಾಮಿ ನ್ಯಾಷನಲ್ ಪಾರ್ಟಿಗಳಿಗೆ ಸಂಬಂಧ ಇದೆ ಎನ್ನಲಾಗಿದೆ. ಬುಧವಾರ ಬೆಳಗ್ಗಿನ ಜಾವವೂ ಕೂಡಾ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಕೂಡಾ ಗಾಯಗೊಂಡಿದ್ದಾರೆ.