ಇಸ್ಲಾಮಾಬಾದ್, ಬುಧವಾರ, 20 ಅಕ್ಟೋಬರ್ 2010( 16:15 IST )
ಪಾಕಿಸ್ತಾನದ ಮಾಜಿ ಅಧ್ಯಕ್ಷ ಫಾರೂಕ್ ಅಹಮ್ಮದ್ ಖಾನ್ ಲೆಘರಿ ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ತೀ್ರ ಅಸ್ವಸ್ಥತೆಯ ಕಾರಣದಿಂದ ಅಸುನೀಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧೀ ಕಾಯಿಲೆಗಳಿಂದ ಬಳಲುತ್ತಿದ್ದ ಲಘರಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಪಾಕಿಸ್ತಾನದ ಸದ್ಯದ ಪ್ರಮಖ ಆಳುವ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಸಂಸ್ಥಾಪಕ ಸದಸ್ಯರಾಗಿದ್ದು, ನವೆಂಬರ್ 1993ರಿಂದ 1997ರ ಡಿಸೆಂಬರ್‌ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲೇ 1996ರಲ್ಲಿ ಲಘರಿ ಅವರು ಭ್ರಷ್ಟಾಚಾರದ ಕಾರಣದಿಂದ ಆಗಿನ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದೇ ಕಾರಣದಿಂದ ಇವರು ತನ್ನ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಲಾಗಿರಲಿಲ್ಲ.